ಉಡುಪಿ: ಮತದಾನದ ಹಕ್ಕು ಚಲಾಯಿಸಿದ ನೂತನ ವಧು, ವರರು

Update: 2019-04-18 14:48 GMT

ಉಡುಪಿ, ಎ.18: ಮತದಾನದ ದಿನವಾದ ಇಂದು ಉಡುಪಿ ಜಿಲ್ಲೆಯಾ ದ್ಯಂತ ಹಲವು ವಿವಾಹಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಧು ಮಕ್ಕಳು ಹಸೆಮಣೆಗೆ ಏರುವ ಮೊದಲು ತಮ್ಮ ಕುಟುಂಬದೊಂದಿಗೆ ಮತಗಟ್ಟೆಗಳಿಗೆ ತೆರಳಿ ಹುರುಪಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು.

 ಹಸೆಮಣೆ ಏರುವ ಮುನ್ನ ಸಿಂಗಾರಗೊಂಡು ಮತಗಟ್ಟೆಗೆ ಆಗಮಿಸಿದ ಕಟಪಾಡಿ ಮಟ್ಟು ನಿವಾಸಿ ಶೃತಿ, ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಕೋಟೆ ಗ್ರಾಪಂನ ಮತಗಟ್ಟೆ ಸಂಖ್ಯೆ- 3ರಲ್ಲಿ ಕುಟುಂಬ ಸಹಿತ ಆಗಮಿಸಿ ಮತದಾನ ಮಾಡಿದರು. ಕಾಪು ವಿಧಾನಸಭಾ ಕ್ಷೇತ್ರದ ಕರಂದಾಡಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಧುಮಗ ರಿತೇಶ್ ಸನಿಲ್ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿ, ನಂತರ ಮದುವೆ ಕಾರ್ಯದಲ್ಲಿ ಭಾಗಿಯಾದರು.

ಹುಣ್ಸೆಮಕ್ಕಿ ನಿವಾಸಿ ಶಾಂತಾ, ಕುಂದಾಪುರದ ಹೊಂಬಾಡಿ ಮಂಡಾಡಿ ವಾರ್ಡ್‌ನ ಮತಗಟ್ಟೆಯಲ್ಲಿ ತನ್ನ ಮತದಾನದ ಹಕ್ಕನ್ನು ಚಲಾಯಿಸಿದರು. ಬಳಿಕ ಸಾಯಿಬರಕಟ್ಟೆ ಮದುವೆ ಮನೆಗೆ ತೆರಳಿದರು. ಅದೇ ರೀತಿ ಹೆಬ್ರಿಯ ಇಂದಿರಾ ನಗರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ನವ ವಧು ಅಕ್ಷತಾ ಬೆಳಗ್ಗೆ ಮತಗಟ್ಟೆಗೆ ತೆರಳಿ ಪ್ರಥಮ ಮತದಾರರಾಗಿ ಮತದಾನ ಮಾಡಿದರು.

ಮಲ್ಪೆಯ ಕೊಳ ನಿವಾಸಿ ದೀಪಾ ಕಮಲಶಿಲೆಯಲ್ಲಿ ನಡೆಯುವ ತನ್ನ ವಿವಾಹ ಕಾರ್ಯಕ್ರಮಕ್ಕೆ ತೆರಳುವ ಮೊದಲು ವಡಬಾಂಡೇಶ್ವರ ಗಾಂಧಿ ಶತಾಬ್ದಿ ಶಾಲೆಯ ಮತಗಟ್ಟೆಗೆ ಮನೆಯವರೊಂದಿಗೆ ಆಗಮಿಸಿ ಮತದಾನ ಮಾಡಿ ದರು. ನಂತರ ಅವರೆಲ್ಲ ವಿವಾಹ ಕಾರ್ಯಕ್ಕೆ ಹೊರಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News