ಮೊಮ್ಮಗನ ಸಹಾಯದಲ್ಲಿ ಮತದಾನ ಮಾಡಿದ 99ರ ಐಸುಮ್ಮ

Update: 2019-04-18 14:51 GMT

ಪುತ್ತೂರು: ಕಳೆದ 67 ವರ್ಷಗಳಿಂದ ತಪ್ಪದೆ ಮತದಾನ ಮಾಡುತ್ತಿರುವ 99ರ ಹರೆಯದ ಅಜ್ಜಿ ಐಸುಮ್ಮ ಅವರು ಗುರುವಾರ ತನ್ನ ಮೊಮ್ಮಗನ ಸಹಾಯದಲ್ಲಿ ಶೇಖಮಲೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಕಣ್ಣು ದೃಷ್ಠಿ ಕಳೆದುಕೊಂಡಿರುವ ಐಸುಮ್ಮ ಅವರು ಮೊಮ್ಮಗ ಎಸ್.ಬಿ. ಬಶೀರ್ ಅವರ ಸಹಾಯದಲ್ಲಿ ಶೇಖಮಲೆ ಶಾಲಾ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

1952ರಿಂದ ಈ ತನಕ ಎಲ್ಲಾ ಲೋಕಸಭೆ, ವಿಧಾನಸಭೆ, ಜಿ.ಪಂ, ತಾ.ಪಂ, ಗ್ರಾ.ಪಂ ಚುನಾವಣೆಯಲ್ಲಿ ಅಜ್ಜಿಯು ತಪ್ಪದೆ ಮತ ಚಲಾಯಿಸಿದ್ದು, ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ ತನ್ನ ಸಹಾಯದಲ್ಲಿ ಮತದಾನ ಮಾಡುತ್ತಿದ್ದಾರೆ ಎಂದು ಎಸ್.ಬಿ. ಬಶೀರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News