ಮತದಾನದಲ್ಲಿ ಗೊಂದಲ ಆರೋಪ : ಯುವಕ ಪೊಲೀಸ್ ವಶಕ್ಕೆ

Update: 2019-04-18 15:33 GMT

ಪಡುಬಿದ್ರಿ: ತಾನು ಚಲಾಯಿಸಿದ ಮತ ಬೇರೊಂದು ಅಭ್ಯರ್ಥಿಗೆ ಚಲಾವಣೆಯಾಗಿ ಎಂದು ಸಂಶಯ ವ್ಯಕ್ತಪಡಿಸಿದ ಕಾರಣ ಆತನಿಗೆ ಚಾಲೆಂಜಿಂಗ್ ಮತಕ್ಕೆ ಅವಕಾಶ ನೀಡಿದ ಘಟನೆ ಎಲ್ಲೂರಿನ ವಾರ್ಡ್ ಮತಗಟ್ಟೆಯಲ್ಲಿ ನಡೆದಿದೆ. 

ಲ್ಯಾನ್ಸಿ ವೀರೇಂದ್ರ ಕುಮಾರ್ ಡಿಸೋಜ ಎಂಬವರು ಮೊದಲು ಮತದಾನ ಮಾಡಿದಾಗ ಆತ ತಾನು ಮತ ಚಲಾಯಿಸಿದ ಸಂಖ್ಯೆಯ ಬದಲು ಇನ್ನೊಂದು ಸಂಖ್ಯೆಗೆ ಚಲಾವಣೆಯಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಇದರಿಂದ ಮತದಾನ ಅಧಿಕಾರಿಗಳು ಎಲ್ಲರೆದುರು ಎರಡನೇ ಬಾರಿ ಮತದಾನ ಮಾಡುವ ಅವಕಾಶವಿತ್ತಾಗ ಸರಿಯಾಗಿಯೇ ಆ ಮತ ದಾಖಲಾದ ಕಾರಣಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ವಶಪಡಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಈ ಬಗ್ಗೆ ಕಾಪು ತಾಲೂಕು ಚುನಾವಣಾಧಿಕಾರಿ ನಾಗರಾಜ್ ಅವರೊಂದಿಗೆ ಮಾತನಾಡಿದಾಗ, ಮತದಾರ ಚಾಲೆಂಜ್ ಮಾಡಿದ ವೇಳೆ ಮತಗಟ್ಟೆ ಅಧಿಕಾರಿ ಆತನ ಸಂಪೂರ್ಣ ವಿವರ, ಹೆಬ್ಬೆಟ್ಟು, ಮುಂತಾದವುಗಳನ್ನು ಸೂಕ್ತ ಪ್ರಪತ್ರದಲ್ಲಿ ದಾಖಲಿಸಿಕೊಂಡು ತನ್ನ ಹಾಗೂ ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಎರಡನೇ ಮತದಾನಕ್ಕೆ (ಟೆಕ್ಸ್ಟ್ ವೋಟು) ಅವಕಾಶ ನೀಡಿದ್ದಾರೆ. ಆಗ ಅದು ಸಹಜವಾಗಿಯೇ ಸರಿಯಾಗಿ ದಾಖಲಾದ ಕಾರಣದಿಂದ ಆತನ ವಿರುದ್ಧ ಜನಪ್ರಾತಿನಿಧ್ಯ ಕಾಯಿದೆಯ 49ಎಂ. ಎ. ಸೆಕ್ಷನ್ ಅನ್ವಯ 6 ತಿಂಗಳುಗಳ ಸಜೆ ಇರಬಹುದಾದ ಪ್ರಕರಣದನ್ವಯ ಮತಗಟ್ಟೆ ಅಧಿಕಾರಿ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಪಡುಬಿದ್ರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News