ಉಪ್ಪಿನಕುದ್ರು : ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ

Update: 2019-04-20 14:15 GMT

ಕುಂದಾಪುರ, ಎ.20: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಚತುರ್ಥ ವಾರ್ಷಿಕೋತ್ಸವ ಹಾಗೂ 50ನೇ ಕಾರ್ಯಕ್ರಮ ಉಪ್ಪಿನಕುದ್ರಿನ ‘ಗೊಂಬೆಮನೆ’ಯಲ್ಲಿ ಇತ್ತೀಚೆಗೆ ನಡೆಯಿತು.

ಕನ್ನಡ ಸಾಹಿತ್ಯಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿಯ 50ನೇ ಕಾರ್ಯಕ್ರಮ ಹಾಗೂ 2018-19ನೇಸಾಲಿನ ವಾರ್ಷಿಕ ಚಿತ್ರಣಗಳನ್ನೊಳಗೊಂಡ ‘ಗೊಂಬೆ ಪ್ರಪಂಚ’ ವಾರ್ಷಿಕ ಪತ್ರಿಕೆಯನ್ನು ಕುಂದಾಪುರದ ಪ್ರಸಿದ್ಧ ವಕೀಲ ಎ.ಎಸ್.ಎ್.ಹೆಬ್ಬಾರ್ ಬಿಡುಗಡೆ ಗೊಳಿಸಿ ದರು.

ಇದೇ ಸಂದರ್ಭದಲ್ಲಿ ಸೂತ್ರದ ಗೊಂಬೆಯಾಟದ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2019ನ್ನು ಮದ್ದಲೆವಾದಕ ನಾಗೂರು ಮಹಾಬಲೇಶ್ವರ ಶೇಟ್‌ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪತ್ನಿ ಸ್ವೀಕರಿಸಿದರು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಗೊಂಬೆಯಾಟ ಕಲಾವಿದ ಯು.ವಾಮನ್ ಪೈ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ್ ಭಟ್, ಕುಂದಾಪುರದ ಉದ್ಯಮಿ ಅರುಣ್ ಕುಮಾರ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ರತ್ನಾಕರ್ ಪೈ ಉಪಸ್ಥಿತರಿದ್ದರು.

ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಸೀನಿಯರ್ ಮೆನೇಜರ್ ಬಾಬುರಾಯ ಶೆಣೈ, ಉಡುಪಿ (ಸಮಾಜಸೇವೆ), ಉದಯ ಭಂಡಾರ್‌ಕಾರ್ (ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರು), ವಸಂತಿ ಆರ್. ಪಂಡಿತ್ (ಸಾಂಸ್ಕೃತಿಕ ಸೇವೆ), ನಾಗಶ್ರೀ ಗಣೇಶ್ ಸೇರುಗಾರ್ ಉಪ್ಪಿನಕುದ್ರು (ಕ್ರೀಡಾರಂಗ), ಗುರುದೀಪಕ್ ಕಾಮತ್ (ಕ್ರೀಡಾರಂಗ), ಶಾಂತಾ ವಾಸುದೇವ ಪೂಜಾರಿ (ಯಕ್ಷಗಾನ ಪ್ರಸಂಗಕರ್ತೆ) ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲೆಯ ಹಿರಿಯ ಗೊಂಬೆಯಾಟ ಕಲಾವಿದ ವೆಂಕಟರಮಣ ಬಿಡುವಾಳ್ ರಿಗೆ ಆರ್ಥಿಕ ಸಹಾಯ ನೀಡಲಾಯಿತು. ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿಗರ್ಳಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ಪತ್ರಕರ್ತೆ ಡಾ. ಸಂಧ್ಯಾ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿತ್ತು. ಅಕಾಡೆಮಿ ವಿದ್ಯಾರ್ಥಿಗಳಿಂದ ‘ನರಕಾಸುರ ವಧೆ’ ಗೊಂಬೆಯಾಟ ಪ್ರಾತ್ಯಕ್ಷಿಕೆ, ಸಾಧನಾ ಕಲಾ ಸಂಗಮ ಕುಂದಾಪುರ ಇವರಿಂದ ಮಂತ್ರಪುಷ್ಪ, ಸತೀಶ್ ಎಂ. ನಾಯಕ್‌ರಿಂದ ಗಿಂಡಿ ನರ್ತನ, ಪೂಜಾ ಭಟ್ ಚೇಂಪಿ ಮತ್ತು ಬಳಗದಿಂದ ಕೋಲಾಟ ಪ್ರದರ್ಶನ, ಬಂಟ್ವಾಡಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೆರಂಜನಾ ಕಾರ್ಯಕ್ರಮ ನಡೆದವು.

ಶಿಕ್ಷಕ ನಾಗೇಶ್ ಶ್ಯಾನುಭಾಗ್, ಚೇತನಾ ಶ್ಯಾನುಭಾಗ್ ಹಾಗೂ ರಾಜೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News