ಸಿದ್ಧ ಆಹಾರ ತಯಾರಿಕಾ ಕೇಂದ್ರಗಳ ಶುದ್ಧತೆ ಪರಿಶೀಲಿಸಲು ಆಗ್ರಹ

Update: 2019-04-20 15:20 GMT

ಉಡುಪಿ, ಎ.20: ಉಡುಪಿ ನಗರದಲ್ಲಿ ಎಣ್ಣೆ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಗಳಿಗೆ ವಿತರಿಸುವ ಬಹಳಷ್ಟು ಗೃಹ ಉದ್ಯಮಗಳಿದ್ದು, ಹಲವು ಕಡೆಗಳಲ್ಲಿ ಕಳಪೆ ಗುಣಮಟ್ಟದ ಎಣ್ಣೆ, ಅಶುದ್ಧ ನೀರು ಹಾಗೂ ಇತರ ಕಳಪೆ ಸಾಮಗ್ರಿಗಳನ್ನು ಬಳಸಿ ಆಹಾರವನ್ನು ತಯಾರಿಸುವುದು ಕಂಡು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶುದ್ಧತೆಯನ್ನು ಪರಿಶೀಲಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಒತ್ತಾಯಿಸಿದೆ.

ಅಂಗಡಿಗಳಲ್ಲಿ ಮಾರಟಗಾರರು ವಿತರಿಸುವ ಸಮೋಸ ಖಾದ್ಯದಲ್ಲಿ ಕಬ್ಬಿಣದ ಮೊಳೆ, ಸ್ಟೆಬ್ಲಜರ್ ಪಿನ್, ಜಿರಲೆ ಮೊದಲಾದ ಕೀಟಗಳ ಕಳೇಬರಗಳು ಇರು ವುದು ಗಿರಾಕಿಗಳಿಗೆ ಕಂಡು ಬಂದಿದೆ. ಇಂತಹ ಕಳಪೆ ಆಹಾರ ಸೇವಿಸಿ ಸಾರ್ವ ಜನಿಕರು ಉದರ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ವಿಷ ಆಹಾರ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ, ಸಾವು ಕಂಡಿರುವ ಘಟನೆಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕರು ಪರೋಟ, ನೀರುದೋಸೆ, ಇಡ್ಲಿ, ಸಮೋಸ, ಪಪ್ಸ್ ಹೀಗೆ ಮೊದಲಾದ ಸಿದ್ಧ ಆಹಾರ ತಯಾರಿಸುವ ಕೇಂದ್ರಗಳಿಗೆ ಭೇಟಿ ನೀಡಬೇಕು. ಬಾಣಸಿಗರು ಆಹಾರ ತಯಾರಿಸುವ ಕ್ರಮ, ನೀರಿನ ಶುದ್ಧತೆ, ಗ್ರಹ ಉದ್ಯಮ ಪರಿಸರದ ಸ್ವಚ್ಚತೆ, ಬಳಸುವ ಸಾಮಾಗ್ರಿಗಳ ಗುಣಮಟ್ಟವನ್ನು ತಪಾಸಣೆ ಮಾಡಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News