ಮಂಗಳೂರು: ಎ.20ರಂದು ಬಿಸು ಹಬ್ಬ ತುಳುವರಿಗೆ ಹೊಸ ವರುಷದ ಆರಂಭ

Update: 2019-04-20 16:30 GMT

ಮಂಗಳೂರು, ಎ. 20: ಬಿಸು ಹಬ್ಬ ತುಳುವರಿಗೆ ಹೊಸ ವರುಷದ ಆರಂಭ. ಹೊಸ ವರುಷದೊಂದಿಗೆ ಹೊಸ ಹುರುಪಿನೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುವಂತಾಗಿದೆ ಎಂದು ಮಾಹೆ ವಿ.ವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ.ಹೆಗ್ಡೆ ಶುಭಹಾರೈಸಿದರು.

ನಗರದ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಬಂಟರಯಾನೆ ನಾಡವರ ಮಾತ್ರ ಸಂಘ ,ಮಂಗಳೂರು ತಾಲೂಕು ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬಿಸು ಸಮ್ಮಿಲನ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಕಿಶೋರ್ ಶೆಟ್ಟಿ ಬಿಸು ಪರ್ಬದ ಮಹತ್ವದ ಬಗ್ಗೆ ವಿವರಿಸಿ ದರು.ಕ್ಷೇಮಾ ದಂತ ವಿಜ್ಞಾನ ವಿಭಾಗದ ಡೀನ್ ಡಾ.ಅಮಿತ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಬಿಸು ಹೊಸ ವರುಷದ ಸಂಭ್ರಮದ ಜೊತೆಗೆ ತುಳುವರ ಸಂಸ್ಕೃತಿಗಳ ಸಂಗಮ ವಾಗಿದೆ. ಮುಂದಿನ ಪೀಳಿಗೆಗೆ ತುಳುವರ ಸಂಸ್ಕತಿ ವಿಚಾರ ತಿಳಿಸಲು ಬಿಸು ಸಮ್ಮಿಲನದಂತಹ ಕಾರ್ಯಕ್ರಮ ಮಹತ್ವವನ್ನು ಪಡೆದಿದೆ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಾತ್ರ್ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಸಮಾರಂಭದಲ್ಲಿ ಉತ್ತಮ ಕ್ರಷಿಕ ಕೇಶವ ಭಂಡಾರಿ,ಪಿಯುಸಿ ಯಲ್ಲಿ 5ನೆ ರ್ಯಾಂಕ್ ಪಡೆದ ಪ್ರ ದ್ವಿ ರೈ,ಹಾಗೂ ಪ್ರತಿಭಾವಂತ ವೈದ್ಯ ರಾದ ಡಾ. ಭವಿಷ್ಯಾ ಶೆಟ್ಟಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಬಂಟರ ಸಂಘದ ಮುಖಂಡರಾದ  ಕೆಂಚನೂರು ಸೋಮಶೇಖರ ಶೆಟ್ಟಿ, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ರವಿರಾಜ ಶೆಟ್ಟಿ, ಉಮೇಶ್ ರೈ,ಡಾ.ಅಶಾಜ್ಯೋತಿ ರೈ, ಜಯರಾಮ ಸಾಂತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News