ತಂದೆಯನ್ನು ಅವಮಾನಿಸಿದ ವ್ಯಕ್ತಿಯನ್ನೂ ಅಪ್ಪಿಕೊಳ್ಳುವ ಧೈರ್ಯ ರಾಹುಲ್‍ ಗೆ ಇದೆ: ಪ್ರಿಯಾಂಕಾ

Update: 2019-04-21 10:52 GMT

ತಿರುವನಂತಪುರ, ಎ.21: “ಕಾಂಗ್ರೆಸ್ ಅಧ್ಯಕ್ಷ ಹಾಗೂ ನನ್ನ ಸಹೋದರ ರಾಹುಲ್‍ ಗಾಂಧಿಯವರನ್ನು ಕಳೆದ ಒಂದು ದಶಕದಿಂದಲೂ ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ ನಮ್ಮ ತಂದೆ- ತಾಯಿಯನ್ನು ಅವಮಾನಿಸಿದವರನ್ನು ಕೂಡಾ ಅಪ್ಪಿಕೊಳ್ಳುವ ಧೈರ್ಯ ಅವರಿಗೆ ಇದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಕಳೆದ ವರ್ಷ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಸಂದರ್ಭ ಪ್ರಧಾನಿ ಭಾಷಣದ ಬಳಿಕ ಅವರನ್ನು ರಾಹುಲ್ ಆಲಂಗಿಸಿಕೊಂಡ ಘಟನೆಯನ್ನು ಪ್ರಿಯಾಂಕಾ ಉಲ್ಲೇಖಿಸಿದರು.

ಭಾವನಾತ್ಮಕ ಭಾಷಣದಲ್ಲಿ, "ಹಲವು ವರ್ಷಗಳಿಂದ ರಾಹುಲ್ ಮೇಲೆ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ. ವಿರೋಧಿಗಳು ಅವರನ್ನು ಹೇಗೆ ಬಿಂಬಿಸುತ್ತಿದ್ದಾರೋ ಅದಕ್ಕಿಂತ ಸಂಪೂರ್ಣ ಭಿನ್ನ ವ್ಯಕ್ತಿತ್ವ ಅವರದ್ದು. ಅವರು ಬಿಂಬಿಸುತ್ತಿರುವ ರೀತಿ ಸತ್ಯಕ್ಕೆ ದೂರವಾದದ್ದು. ಮಕ್ಕಳಾಗಿ ನಾವು ವಿನಾಶ ಹಾಗೂ ನಷ್ಟವನ್ನು ಜತೆಯಾಗಿಯೇ ಅನುಭವಿಸಿದ್ದೇವೆ. ಇಷ್ಟಾಗಿಯೂ ಯಾರ ವಿರುದ್ಧವೂ ರಾಹುಲ್ ಸಿಟ್ಟುಗೊಂಡದ್ದಿಲ್ಲ. ನನ್ನ ಸಹೋದರ ಹಾಗೂ ಒಳ್ಳೆಯ ಸ್ನೇಹಿತನಿಗೆ ಮತ ಯಾಚಿಸಲು ನಿಮ್ಮಲ್ಲಿಗೆ ಬಂದಿದ್ದೇನೆ" ಎಂದು ಬಣ್ಣಿಸಿದರು.

"ರಾಹುಲ್ ಬ್ಯ್ಲಾಕ್‍ಬೆಲ್ಟ್, ತರಬೇತಿ ಪಡೆದ ಪೈಲಟ್, ಏಸ್ ಡೈವರ್ ಮತ್ತು ಪರ್ವತಾರೋಹಿ. ಆದರೆ ಅವರಿಗೆ ಪ್ರಚಾರದ ಹುಚ್ಚು ಇಲ್ಲ. ನಾನು ಈ ರೀತಿ ಅವರನ್ನು ಬಣ್ಣಿಸುವುದನ್ನು ಅವರು ಇಷ್ಟಪಡಲಾರರು. ಪುರಾಣ ಹಾಗೂ ಕಥೆಗಳ ಬಗ್ಗೆ ಆಳವಾದ ಜ್ಞಾನ ಇದ್ದು, ದೇಶದ ಸಂಸ್ಕೃತಿಯನ್ನು ಕಾಯುವವರು ಎಂದು ಬಿಂಬಿಸಿಕೊಳ್ಳುತ್ತಿರುವವರಿಗೆ ಇಷ್ಟೊಂದು ಆಳವಾದ ಜ್ಞಾನ ಇರುವ ಬಗ್ಗೆ ನನಗೆ ಅನುಮಾನವಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News