ನೆಲವನ್ನು ಆಕ್ರಮಿಸುವ ಅಭಿವೃದ್ಧಿ ಪರಿಕಲ್ಪನೆಯಿಂದ ಪರಿಸರಕ್ಕೆ ಹಾನಿ: ಡಾ. ಚೆನ್ನಕೇಶವ

Update: 2019-04-21 12:17 GMT

ಮಂಗಳೂರು, ಎ. 21: ನೆಲವನ್ನು ಆಕ್ರಮಿಸುವುದೇ ಅಭಿವೃದ್ಧಿಯೆಂದು ಭಾವಿಸುವ ಅಭಿವೃದ್ಧಿ ಪರಿಕಲ್ಪನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ. ಚೆನ್ನೇಶ್ ತಿಳಿಸಿದ್ದಾರೆ.

ನಗರದ ಕೊಡಿಯಾಲ್ ಬೈಲ್ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿಂದು ಡಿವಿಜಿ ಬಳಗದ ವತಿಯಿಂದ ಡಿವಿಜಿ-ಬಿಜಿಎಲ್ 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಂದು ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.

ಭೂಮಿಯನ್ನು ಆಕ್ರಮಿಸಿ ಅಲ್ಲಿನ ಪ್ರಾಕೃತಿಕ ಸಂರಚನೆಯನ್ನು ಬದಲಾಯಿಸಿ ನಗರಗಳನ್ನು ನಿರ್ಮಿಸುವ ಅಭಿವೃದ್ಧಿ ಪರಿಕಲ್ಪನೆ ಈ ಭೂಮಿಯ ಮೇಲಿನ ಸಾಕಷ್ಟು ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗಿದೆ. ಸಸ್ಯ ವಿಜ್ಞಾನಿ ಬಿಜಿಎಲ್ ಸ್ವಾಮಿ ಅಭಿವೃದ್ಧಿಯ ಬಗ್ಗೆ ಭಿನ್ನವಾದ ದೃಷ್ಟಿಕೋನವನ್ನು ಹೊಂದ್ದಿರು. ಸಸ್ಯ ಜಗತ್ತಿನ ಬಗ್ಗೆ ಅವರು ಕೈಗೊಂಡ ಸಂಶೋಧನೆಯ ಮೂಲಕ ಸುಮಾರು 7 ಹೊಸ ಪ್ರಭೇದಗಳನ್ನು ಗುರುತಿಸಿದರು. ಸಸ್ಯಗಳ ಅಂಗ ರಚನೆಯ ಬಗ್ಗೆ ವಿಶೇಷ ಅನುಭವಹೊಂದಿದ್ದ ಅವರು ಸಾಹಿತ್ಯದ ಮೂಲಕ ವಿಜ್ಞಾನವನ್ನು ಕನ್ನಡದ ಅನು ಸಂಧಾನದ ಮೂಲಕ ಜನರಿಗೆ ತಲುಪಿಸಲು ಯತ್ನಿಸಿದ್ದಾರೆ ಅಗಾಧ ಸಸ್ಯ ಸಂಪತ್ತನ್ನು ಅವರು ಸಂಪತ್ತೆಂದು ಭಾವಿಸಿದ್ದರು ಎಂದು ಚೆನ್ನೇಶ್ ತಿಳಿಸಿದ್ದಾರೆ.

ವಿಜ್ಞಾನದ ಕಲಿಕೆಯ ಬಗ್ಗೆ ಆಸಕ್ತಿ ಕಡಿಮೆ :- ಇತ್ತೀಚಿನ ದಿನಗಳಲ್ಲಿ ವಿಜ್ಞಾನದ ಕಲಿಕೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜಗತ್ತಿನ ಶೇ 50ರಷ್ಟು ಸಸ್ಯ ಪ್ರಬೇಧಗಳನ್ನು ಇದುವರೆಗೆ ಶೇ 2ರಷ್ಟು ವಿಜ್ಞಾನಿಗಳು ಮಾತ್ರ ಸಂಶೋಧಿಸಿದ್ದಾರೆ.ವಿಜ್ಞಾನದ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವ ಜಾಗೃತಿ ನಡೆಯ ಬೇಕಾಗಿದೆ. ಬಹಳಷ್ಟು ಕಡೆಗಳಲ್ಲಿ ಏನಾದರೂ ಸಮಸ್ಯೆಗಳು ಉಂಟಾದಾಗ ಮಾತ್ರ ವಿಜ್ಞಾನಿಗಳನ್ನು ನೆನಪಿಸುವ ಕೆಲಸ ಆಗುತ್ತದೆ ಹೊರತು ಇನ್ನಿತರ ಸಂದರ್ಭದಲ್ಲಿ ವಿಜ್ಞಾನಿಗಳ ಬಗ್ಗೆ ಹೆಚ್ಚು ಗಮನವಿರುವುದಿಲ್ಲ ಎಂದು ಡಾ.ಚೆನ್ನೇಶ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಮಹಾಬಲೇಶ್ವರ ವಹಿಸಿ ಮಾತನಾಡುತ್ತಾ, ಡಿವಿಜಿ ಯವರ ಮಂಕು ತಿಮ್ಮನ ಕಗ್ಗ ನಮ್ಮ ಬದುಕಿಗೆ ಒಂದು ಮಾರ್ಗದರ್ಶನ ಮಾಡುವ ಅಮೂಲ್ಯ ಕೃತಿಯಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ಮಹತ್ವದ ಕೆಲಸ ಎಂದು ತಿಳಿಸಿದ್ದಾರೆ.

ಡಿವಿಜಿ ಮಾನವತಾವಾದಿ:

ಡಿವಿಜಿ ಕೃತಿಗಳ ಮೂಲಕ ಸಾಕಷ್ಟು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ ಮಾನವತಾವಾದಿಯಾಗಿದ್ದರು.ಅಪಾರವಾದ ಲೋಕಾನುಭವವನ್ನು ಹೊಂದಿದ್ದರು.ಪ್ರಜಾ ಪ್ರಭುತ್ವದ ಬಗ್ಗೆ ನಂಬಿಕೆ ಹೊಂದಿದ್ದರು ಎಂದು ಡಿವಿಜಿಯರ ಶಿಷ್ಯೆ ಸರಸ್ವತಿ ತಿಳಿಸಿದ್ದಾರೆ.ಸಮಾರಂಭದಲ್ಲಿ ಡಿವಿಜಿ ಬಳಗದ ಡಾ.ವಿರೋಪಾಕ್ಷ, ಕನಕರಾಜ್, ಎ.ಎಸ್.ನಟೇಶ್, ಡಿವಿಜಿ ಬಳಗದ ಹಿರಿಯರಾದ ನಟರಾಜ್, ಚಂದ್ರ ಮೌಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News