ರಂಗಭೂಮಿಗೆ ಛಿದ್ರಗೊಂಡ ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ: ಡಾ.ವಿವೇಕ್ ರೈ

Update: 2019-04-21 14:21 GMT

ಉಡುಪಿ, ಎ.21: ರಾಜಕೀಯ ಸೇರಿದಂತೆ ಆಧುನಿಕ ಬದುಕು ಬೇರೆ ಬೇರೆ ರೂಪದಲ್ಲಿ ಮನುಷ್ಯರನ್ನು ಛಿದ್ರ ಮತ್ತು ವಿಭಜಿಸುತ್ತಿದೆ. ಇವುಗಳ ಮಧ್ಯೆ ನಾವೆಲ್ಲ ಒಂದು ಎಂಬ ಭಾವನೆಯನ್ನು ಸಂಸ್ಕೃತಿಯ ವಿವಿಧ ಪ್ರಕಾರಗಳು ನಮ್ಮಲ್ಲಿ ಮೂಡಿ ಸುತ್ತದೆ. ಹೀಗೆ ಛಿದ್ರಗೊಂಡವುಗಳನ್ನು ಒಟ್ಟು ಸೇರಿಸುವ ಕೆಲಸವನ್ನು ರಂಗ ಭೂಮಿ ಮಾಡುತ್ತದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಹೇಳಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ಆನಂದೋತ್ಸವದ ಎರಡನೆ ದಿನವಾದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಶಿಕ್ಷಣ ತಜ್ಞ ಡಾ.ಎಚ್.ಶಾಂತಾರಾಮ್ ಅವರಿಗೆ ತಲ್ಲೂರು ಗಿರಿಜಾ ಡಾ.ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಂದು ದೇಶದ ಸಂಸ್ಕೃತಿ ಆರೋಗ್ಯದ ವೌಲ್ಯವು ಆ ದೇಶದ ರಂಗ ಚಟುವಟಿಕೆಗಳ ಮೂಲಕ ಪಡೆಯುತ್ತದೆ. ಇಂದು ದೈಹಿಕ ಆರೋಗ್ಯ ಕಾಪಾ ಡಲು ಸಾಕಷ್ಟು ಸುಸಜ್ಜಿತ ಆಸ್ಪತ್ರೆಗಳಿದ್ದರೂ ಮನುಷ್ಯನ ಮಾನಸಿಕ ಆರೋಗ್ಯ ಮಾತ್ರ ದಿನೇ ದಿನೇ ಕೆಡುತ್ತಿದೆ. ಜನರನ್ನು ಮಾನಸಿಕ ಆರೋಗ್ಯವಂತರನ್ನಾಗಿ ಉಳಿಸಿಕೊಂಡಿರುವುದರಲ್ಲಿ ರಂಗಭೂಮಿಯ ಕೊಡುಗೆ ಅಪಾರ ಎಂದರು.

ಸ್ವಸ್ಥ ಚಿತ್ತದಿಂದ ಯೋಚನೆ ಮಾಡುವಂತಹ ನಡವಳಿಕೆ ಬರುವುದಕ್ಕೆ ಬೇಕಾದ ಅವಕಾಶಗಳು, ಆಯಾಮಗಳು ಸಾಹಿತ್ಯದ ಓದು, ಸಂಗೀತ ಕಚೇರಿ, ನೃತ್ಯ, ಯಕ್ಷಗಾನ, ನಾಟಕ ನೋಡುವುದರ ಮೂಲಕ ಬರಲು ಸಾಧ್ಯ. ಈ ರೀತಿಯ ಸ್ವಾಸ್ಥ ಕಾಪಾಡುವುದಕ್ಕಾಗಿ ಜಗತ್ತಿನ ಎಲ್ಲ ಎಲ್ಲ ನಗರಗಳಲ್ಲೂ ರಂಗಭೂಮಿ ಚಟುವಟಿಕೆಗಳಿಗೆ ಆ್ಯತೆ ನೀಡಲಾಗುತ್ತಿದೆ ಎಂದು ಅವರು

ರಂಗಭೂಮಿಯಲ್ಲಿ ಚಿತ್ರ, ಹಾಡು, ಸಂಗೀತ, ಅಭಿನಯ, ನೃತ್ಯ, ವೇಷ ಭೂಷಣ, ಬಂಧುತ್ವದ ಕಲ್ಪನೆ, ಹೊಸತನದ ಆಶಾಭಾವನೆ ಇದೆ. ಹಾಗಾಗಿ ರಂಗಭೂಮಿಯು ಸಂಸ್ಕೃತಿಯ ಆರೋಗ್ಯದ ಬಹಳ ದೊಡ್ಡ ಲಕ್ಷ್ಮಣ. ನಮ್ಮ ಅನನ್ಯತೆ ಹಾಗೂ ಅಸ್ಮಿತೆ ಎಂಬುದು ಇವುಗಳನ್ನು ಕಾಪಾಡುವುದರಲ್ಲಿ ಅಡಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಮುಖ್ಯ ಅತಿಥಿಗಳಾಗಿದ್ದರು. ಡಾ.ಎಚ್. ಶಾಂತಾರಾಮ್, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ನಂದಕುಮಾರ್ ಎಂ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯ ದರ್ಶಿ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News