ಧರ್ಮಗುರುಗಳ ಪಾದ ತೊಳೆದ ಪಾಂಬೂರು ಸೊಸೈಟಿ ಸದಸ್ಯರು

Update: 2019-04-21 14:35 GMT

ಶಿರ್ವ, ಎ.21: ಪಾಂಬೂರು ಪವಿತ್ರ ಶಿಲುಬೆಯ ದೇವಾಲಯದ ವ್ಯಾಪ್ತಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ಪಾಂಬೂರು ವಿನ್ಸೆಂಟ್ ಪೌಲ್ ಸೊಸೈಟಿಯ ಸದಸ್ಯರು ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರ ದಿನ ಚರ್ಚ್‌ನ ಧರ್ಮಗುರು ರೆ.ಫಾ.ಪಾವ್ಲ್ ರೇಗೋರವರ ಪಾದ ತೊಳೆ ಯುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.

ಸೊಸೈಟಿಯ ಅಧ್ಯಕ್ಷ ಲೂಕಾಸ್ ಡಿಸೋಜ ನೇತೃತ್ವದಲ್ಲಿ ಸರ್ವ ಸದಸ್ಯರು ಈ ಧರ್ಮಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ಉತ್ಕೃಷ್ಟ ಸರ್ವಾಂಗೀಣ ಪ್ರಗತಿಗೆ ನೀಡಿದ ರೆ.ಫಾ.ಪಾವ್ಲ್ ರೇಗೋ ಅವರಿಗೆ ಗೌರವ ಸಲ್ಲಿಸಿದರು.

ಸೊಸೈಟಿಯ ಆತ್ಮೀಕ ನಿರ್ದೇಶಕರಾಗಿ, ಧರ್ಮಕೇಂದ್ರಕ್ಕೆ ಒಳಪಟ್ಟ 400ಕ್ಕೂ ಅಧಿಕ ಮನೆ ಗಳೊಂದಿಗೆ ನಿಕಟ ಸಂಪರ್ಕ, ಆಪತ್ಕಾಲದಲ್ಲಿ ಸಹಾಯ, ಸರ್ವಧರ್ಮ ಸಮ ಭಾವ ಚಿಂತನೆಗಳ ಪ್ರತೀಕವಾಗಿರುವ ರೆ.ಫಾ.ಪಾವ್ಲ್ ರೇಗೋ, ಅವರ ಮಾದರಿ ಸೇವೆಯನ್ನು ಅವರ ಪಾದ ತೊಳೆಯುವ ಮೂಲಕ ಸ್ಮರಿಸುತ್ತಿದ್ದೇವೆ ಎಂದು ಅಧ್ಯಕ್ಷ ಲೂಕಾಸ್ ಡಿಸೋಜ ತಿಳಿಸಿದರು.

ಈ ಸಂದರ್ದಲ್ಲಿ ಸವಿುತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News