ಮಕ್ಕಳನ್ನು ಜೀವಂತ ಕಲೆಯಲ್ಲಿ ತೊಡಗಿಸಿ: ಸುಕುಮಾರ್ ಮೋಹನ್

Update: 2019-04-21 14:41 GMT

ಹೆಬ್ರಿ, ಎ.21: ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಒಲವು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ನಮ್ಮ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಉಳಿಯ ಬೇಕಾದರೆ ಅವರನ್ನು ಜೀವಂತ ಕಲೆಯಾದ ನಾಟಕ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಹೇಳಿದ್ದಾರೆ.

ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಆಶ್ರಯಲ್ಲಿ ಹೆಬ್ರಿ ಸೂಪರ್ ಮಾರ್ಕೆಟ್‌ನ ಸಹಯೋಗದೊಂದಿಗೆ ರವಿವಾರ ಹೆಬ್ರಿ ದುರ್ಗಾ ಆರ್ಕೆಡ್‌ನ ಶಾರದ ನಂದಪ್ಪ ಶೆಟ್ಟಿ ಸಭಾಭವನದಲ್ಲಿ ನಡೆದ ಚಾಣಕ್ಯ ನಲಿಕಲಿ ಬೇಸಗೆ ಶಿಬಿರದ ವಿದ್ಯಾರ್ಥಿಗಳಿಗೆ ರಂಗ ಅಭಿನಯ ತರಬೇತಿ ಕಾರ್ಯಕ್ರಮದ ಅಂಗ ವಾಗಿ ಮೂರ್ತಿ ದೇರಾಜೆ ರಚನೆಯ ಕಪ್ಪು ಕಾಗೆಯ ಹಾಡು ಮಕ್ಕಳ ನಾಟಕ ವನ್ನು ನಿರ್ೇಶಿಸಿ ಅವರು ಮಾತನಾಡುತಿದ್ದರು.

ಪೋಷಕರು ತಮ್ಮ ಮಕ್ಕಳಲ್ಲಿ ನಾಟಕ ರಂಗಭೂಮಿಯ ಅಭಿನಯ ಕಲೆಯನ್ನು ಕಲಿಸಬೇಕು. ಆ ಮೂಲಕ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಆಸಕ್ತಿಯುಳವರಿಗೆ ನಮ್ಮ ಸಂಘಟನೆ ನಾಟಕ ಅಭಿನಯ ತರಬೇತಿ ನೀಡಲು ಸದಾ ಸಿದ್ಧ ಇದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ ವಹಿಸಿದ್ದರು. ಹೆಬ್ರಿ ಸೂಪರ್ ಮಾರ್ಕೆಟ್‌ನ ಆಡಳಿತ ನಿರ್ದೇಶಕ ಚಾರ ವಾದಿ ರಾಜ ಶೆಟ್ಟಿ, ಪತ್ರಕರ್ತ ಬಾಲಚಂದ್ರ ಮುದ್ರಾಡಿ ಉಪಸ್ಥಿತರಿದ್ದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಸ್ವಾಗತಿಸಿ ದರು. ಮುಟ್ಲುಪಾಡಿ ಉದಯ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News