ಪ್ರಧಾನಿ ಅಭ್ಯರ್ಥಿ ರೇಸ್: ಕೇರಳ ಸಹಿತ ನಾಲ್ಕು ರಾಜ್ಯಗಳಲ್ಲಿ ಮೋದಿಯನ್ನು ಹಿಂದಿಕ್ಕಿದ ರಾಹುಲ್

Update: 2019-04-21 15:54 GMT

ಹೊಸದಿಲ್ಲಿ, ಎ.21: ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಧ್ಯೆ ನೇರ ಸ್ಪರ್ಧೆ ನಡೆದರೆ ಕೇರಳ, ತಮಿಳುನಾಡು, ಪಂಜಾಬ್ ಮತ್ತು ಆಂಧ್ರ ಪ್ರದೇಶದಲ್ಲಿ ರಾಹುಲ್ ಗಾಂಧಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ವರದಿ ತಿಳಿಸಿದೆ.

ಎಪ್ರಿಲ್ 19ರಂದು ನಡೆಸಿದ ಸಮೀಕ್ಷೆಯಲ್ಲಿ, ಒಂದು ವೇಳೆ ನಿಮಗೆ ಪ್ರಧಾನಿಯನ್ನು ನೇರವಾಗಿ ಚುನಾಯಿಸುವ ಆಯ್ಕೆ ದೊರೆತರೆ ಮೋದಿ ಹಾಗೂ ರಾಹುಲ್ ಮಧ್ಯೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಕೇರಳದ 64.96 ಶೇ. ಮತದಾರರು ರಾಹುಲ್‌ರನ್ನು ಬೆಂಬಲಿಸಿದರೆ ಮೋದಿಯನ್ನು ಶೇ.23.97 ಮತದಾರರು ಬೆಂಬಲಿಸಿದರು. ತಮಿಳುನಾಡಿನಲ್ಲಿ ರಾಹುಲ್ ಪರ ಶೇ.60.91, ಮೋದಿ ಪರ 26.93 ಶೇ, ಪಂಜಾಬ್‌ನಲ್ಲಿ ರಾಹುಲ್ ಪರ ಶೇ.37.04, ಮೋದಿ ಪರ 36.05 ಶೇ. ಮತದಾರರು ಒಲವು ವ್ಯಕ್ತಪಡಿಸಿದ್ದಾರೆ. ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರವಿದೆ. ಆದರೆ ದೇಶದ ಉಳಿದ ಭಾಗಗಳಲ್ಲಿ ಮೋದಿ ಬಗ್ಗೆಯೇ ಹೆಚ್ಚಿನವರು ಒಲವು ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮೋದಿ ರಾಹುಲ್‌ಗಿಂತ ಶೇ.26.10ರಷ್ಟು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹರ್ಯಾಣದಲ್ಲಿ ಮೋದಿ ಪರ ಶೇ.61.50, ರಾಹುಲ್ ಪರ ಶೇ.14.92 ಒಲವು ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News