ಶ್ರೀಲಂಕಾ ಭಯೋತ್ಪಾದನೆ ದಾಳಿ ಖಂಡಿಸಿ ಭಿತ್ತಿಪತ್ರ ಪ್ರದರ್ಶನ

Update: 2019-04-21 16:39 GMT

ಉಡುಪಿ, ಎ.21: ಶ್ರೀಲಂಕಾದಲ್ಲಿ ಇಂದು ಭಯೋತ್ಪಾದಕರು ಚರ್ಚಿನಲ್ಲಿ ನಡೆಸಿದ ಬಾಂಬ್ ದಾಳಿಯನ್ನು ಖಂಡಿಸಿ ಮತ್ತು ದುರ್ಘಟನೆಯಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ನೀಡಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಕರ್ನಾಟಕ ರವಿವಾರ ಹೂಡೆಯ ಸಾಲಿಹಾತ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕರ್ತರ ವಲಯ ಮಟ್ಟದ ಸಮಾವೇಶದಲ್ಲಿ 'ನಾವು ನಿಮ್ಮಿಂದಿಗೆ ಇದ್ದೇವೆ' ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.

 ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದವರ ಕುಟುಂಬಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲೆಂದು ಸಮಾವೇಶದಲ್ಲಿ ಪ್ರಾರ್ಥಿಸ ಲಾಯಿತು.

ಈ ಸಂದರ್ಭದಲ್ಲಿ ಎಸ್‌ಐಓ ರಾಷ್ಟ್ರೀಯ ಅಧ್ಯಕ್ಷ ಲಬೀದ್ ಶಾಫಿ, ಎಸ್‌ಐಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು, ರಾಜ್ಯ ಕ್ಯಾಂಪಸ್ ಕಾರ್ಯ ದರ್ಶಿ ಝೀಶಾನ್ ಅಖಿಲ್, ಅಸೀಮ್ ಜವಾದ್, ಶಬ್ಬೀರ್ ಮಲ್ಪೆ, ಅಬ್ದುಲ್ ಕಾದೀರ್ ಹೂಡೆ, ರಫೀಕ್ ಮಲ್ಪೆ, ಅನ್ವರ್ ಅಲಿ ಕಾಪು, ರಿಝ್ವೆನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News