ಬಾಲಕಿಗೆ ಕಿರುಕುಳ ನೀಡಿದ ಆರೋಪ: ಸೈನಿಕನ ಬಂಧನ

Update: 2019-04-21 17:15 GMT

ಆಗ್ರಾ, ಎ. 21: ತನ್ನ ಕುಟುಂಬದೊಂದಿಗೆ ನವಯುಗ್ ಎಕ್ಸ್‌ಪ್ರೆಸ್ ರೈಲು ಏರಿದ 11 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಸೇನಾ ಯೋಧನೋರ್ವನನ್ನು ಆಗ್ರಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿ ಯೋಧನನ್ನು 30ರ ಹರೆಯದ ಗಂಗಾಯ್ಯ ಎಂದು ಗುರುತಿಸಲಾಗಿದೆ. ಆದರೆ, ಈ ಆರೋಪವನ್ನು ಗಂಗಾಯ್ಯ ನಿರಾಕರಿಸಿದ್ದಾರೆ. ಸದ್ಯ ಅವರನ್ನು ಆಗ್ರಾ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ರೈಲು ದಿಲ್ಲಿಯಲ್ಲಿ 45 ನಿಮಿಷಗಳ ಕಾಲ ನಿಂತಾಗ ಈ ಘಟನೆ ನಡೆದಿದೆ. ತಾನು ಆಹಾರ ತರಲು ರೈಲಿನಿಂದ ಇಳಿದಾಗ ಹಾಗೂ ನನ್ನ ಪತ್ನಿ ಕಿರಿಯ ಮಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭ ಯೋಧ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

“ನನ್ನ ಪತ್ನಿ ಹಿಂದಿರುಗಿ ಬಂದಾಗ ನಮ್ಮ ಮಗಳು ನಡೆದ ಘಟನೆಯನ್ನು ಸಂಪೂರ್ಣವಾಗಿ ತಿಳಿಸಿದಳು. ಟೆಕೆಟ್ ಸಹಾಯಕನ ನೆರವಿನಿಂದ ನಾವು ಯೋಧನಲ್ಲಿ ಪ್ರಶ್ನಿಸಿದೆವು” ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಆತ ನಮ್ಮಲ್ಲಿ ಕ್ಷಮೆ ಕೋರಿದ. ಆದರೆ, ನಾವು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆವು. ಆಗ್ರಾ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದ ಬಳಿಕ ಸೇನೆಯ ಸಿಬ್ಬಂದಿ ಹಾಗೂ ಆಗ್ರಾ ರೈಲ್ವೆ ಪೊಲೀಸರು ಯೋಧನನ್ನು ವಶಕ್ಕೆ ತೆಗೆದುಕೊಂಡರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News