ಲೋಕಸಭಾ ಚುನಾವಣೆಗೆ ಕಾಸರಗೋಡು ಸಜ್ಜು

Update: 2019-04-22 07:20 GMT

ಕಾಸರಗೋಡು, ಎ.22: ಲೋಕಸಭಾ ಚುನಾವಣೆಗೆ ಕಾಸರಗೋಡು ಸಜ್ಜಾಗಿದ್ದು, ಮಂಗಳವಾರ ನಡೆಯಲಿರುವ ಮತದಾನದಲ್ಲಿ 10,11,031 ಮಂದಿ  ತಮ್ಮ ಹಕ್ಕು ಚಲಾಯಿಸುವರು.

ಮತದಾನಕ್ಕಾಗಿ ಮತಗಟ್ಟೆಗಳು ಸಜ್ಜಾಗಿದ್ದು, ಜಿಲ್ಲೆಯ 968 ಮತಗಟ್ಟೆಗಳಿಗಿರುವ  ಸಾಮಗ್ರಿ ಗಳ ವಿತರಣೆ ಇಂದು ನಡೆಯಿತು.

ಕಾಸರಗೋಡು ಸರಕಾರಿ ಕಾಲೇಜು, ಪಡನ್ನ ಕ್ಕಾಡ್ ನೆಹರೂ ಕಾಲೇಜುಗಳಲ್ಲಿ ಮತಗಟ್ಟೆಗಳ ಸಾಮಗ್ರಿಗಳ ವಿತರಣೆ ನಡೆದಿದ್ದು, ಮತಗಟ್ಟೆಗೆ ನೇಮಕಗೊಂಡಿರುವ ಸಿಬ್ಬಂದಿ  ಮತಗಟ್ಟೆಗೆ ತಲುಪಿಸಿದರು.

ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದ್ದು, 5,15,942 ಮಹಿಳೆಯರು, 4,95,088 ಪುರುಷರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಪೈಕಿ 24,859 ಹೊಸ ಮತದಾರರಾಗಿದ್ದರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾರರಿದ್ದಾರೆ. 1,05,462 ಮಹಿಳೆಯರು, 1,06,624 ಪುರುಷರು ಸೇರಿದಂತೆ 2,12,086 ಮತದಾರರಿದ್ದಾರೆ.

ಪೈವಳಿಕೆ ಗ್ರಾಮ ಪಂಚಾಯತ್ ನ 105ನೇ ನಂಬ್ರದ  ಪೈವಳಿಕೆ ಸರಕಾರಿ ಹೈಸ್ಕೂಲ್ ಮತಗಟ್ಟೆಯಲ್ಲಿ 1385 ಮತದಾರರಿದ್ದಾರೆ. ವಳಿಯಪರಂಬ ಗ್ರಾಮ ಪಂಚಾಯತ್ ನ 151ನೇ  ವಳಿಯಪರಂಬ ಅಂಗನವಾಡಿ ಮತಗಟ್ಟೆಯಲ್ಲಿ  ಕನಿಷ್ಠ 226 ಮತದಾರಿದ್ದಾರೆ.

ಎಲ್ಲಾ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್  ಹೊಂದಿದ್ದು, ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ.

ಕಾಸರಗೋಡು ಕ್ಷೇತ್ರದ ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 30 ವರ್ಷಗಳಿಂದ ಸಿಪಿಎಂ ನೇತೃತ್ವದ ಎಲ್.ಡಿ.ಎಫ್.ನ ಭದ್ರಕೋಟೆಯಾಗಿರುವ ಈ ಕ್ಷೇತ್ರವು ಎಲ್.ಡಿ.ಎಫ್., ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಹಾಗೂ ಬಿಜೆಪಿಗೆ ನಿರ್ಣಾಯಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News