ಕಲಾಸಿರಿ ರಂಗ ತಂಡದ ಮಕ್ಕಳ ತ್ರಿವರ್ಣ ಬೇಸಿಗೆ ಶಿಬಿರ

Update: 2019-04-22 14:21 GMT

ಕಾರ್ಕಳ, ಎ.22: ಪಡಿ ಸಂಸ್ಥೆ ಮಂಗಳೂರು, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ತಾಲೂಕು ಎಸ್.ಡಿ.ಎಂ.ಸಿ. ವೇದಿಕೆ ಕಾರ್ಕಳ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಕಳ ಹಾಗೂ ನೀರೆ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನದ ಮಕ್ಕಳ ತ್ರಿವರ್ಣ ಬೇಸಿಗೆ ಶಿಬಿರ ಇತ್ತೀಚೆಗೆ ನಡೆಯಿತು.

ಶಿಬಿರದಲ್ಲಿ ರಾಷ್ಟ್ರಮಟ್ಟದ ತರಬೇತುದಾರ ಭಾಸುಮ ಕೊಡಗು ಮಾತನಾಡಿ, ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹುಡುಕುವ ಕೆಲಸ ಮಾಡಬೇಕು ಮತ್ತು ಅದನ್ನು ಪೆ್ರೆತ್ಸಾಹಿಸಬೇಕು ಎಂದು ತಿಳಿಸಿದರು.

ಕಾರ್ಕಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ ಕುಮಾರ್ ಮಾತನಾಡಿ, ಕಲೆ, ನೃತ್ಯ ಯೋಗ ಇತ್ಯಾದಿ ಕಲಿಯುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಭರವಸೆ, ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಶಿಬಿರದಲ್ಲಿ ಮಕ್ಕಳ ಪೂರ್ಣಾವಧಿ ನಾಟಕ ಸಿದ್ದಪಡಿಸಲು ಅದಕ್ಕೆ ಪೂರಕ ವಾಗಿ ರಂಗದಾಟ, ಹಾಡು ಮತ್ತು ಮಕ್ಕಳ ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಹಲವು ಕಲಾ ಪ್ರದರ್ಶನ, ನಾಟಕ, ಹಾಡು, ಕುಣಿತದ ಬಗ್ಗೆ ಮತ್ತು ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯ ಟುವಟಿಕೆ ಗಳನ್ನು ಕಲಿಸಲಾಯಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ ನಾಯಕ್, ತರಬೇತುದಾರರಾದ ಕಾವ್ಯವಾಣಿ ಕೊಡಗು, ನೀರೆ ಗ್ರಾಪಂ ಕಾರ್ಯದರ್ಶಿ ಕಸ್ತೂರಿ, ಸಮಾಜ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ, ವಸಂತಕುಮಾರ್ ಕಾರ್ಯದರ್ಶಿ ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಪ್ರಕಾಶ್ ಕೊಟ್ಯಾನ್ ಅಧ್ಯಕ್ಷರು ಎಸ್.ಡಿ.ಎಮ್.ಸಿ.ಸಮನ್ವಯ ವೇದಿಕೆ ಕಾರ್ಕಳ, ಹೈದರಾಲಿ ಸದಸ್ಯರು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಸುಭಾಸ್‌ಚಂದ್ರ ಸದಸ್ಯರು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ ಮೊಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News