ಸೇತು ಬಂಧ- ಕೌಶಲಾಭಿವೃದ್ಧಿ ಕಾರ್ಯಾಗಾರ ಉದ್ಘಾಟನೆ

Update: 2019-04-22 14:38 GMT

ಶಿರ್ವ, ಎ.22: ವಿದ್ಯಾರ್ಥಿ ಜೀವನ ಎಂಬುದು ಭವಿಷ್ಯದ ಜೀವನದ ದಿಕ್ಸೂಚಿಯಾಗಿದ್ದು, ಅವಕಾಶಗಳ ಸದ್ಬಳಕೆ, ಆತ್ಮವಿಶ್ವಾಸ, ಸಾಧನಾ ಪ್ರವೃತ್ತಿ ಬೆಳೆಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ನಮ್ಮ ಆಸಕ್ತಿಯ ವಿಭಾಗವನ್ನು ಆಯ್ದುಕೊಂಡಾಗ ಯೋಜಿತ ಗುರಿ ಮಟ್ಟಲು ಸಾಧ್ಯ ಎಂದು ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿನಿ ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ನೇಹಾ ಅರಸ್ ಹೇಳಿದ್ದಾರೆ.

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾದ ಎರಡು ದಿನಗಳ ಸೇತು ಬಂಧ- ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಸೋಮವಾರ ಉದಾ್ಘಟಿಸಿ ಅವರು ಮಾತನಾಡುತಿದ್ದರು.

ಈ ಶೈಕ್ಷಣಿಕ ವರ್ಷದಲ್ಲಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ.94.7 ಫಲಿತಾಂಶಕ್ಕೆ ವಿದ್ಯಾರ್ಥಿಗಳ ಸಾಧನೆಯ ಜೊತೆಗೆ ಪ್ರೇರಣಾ ಶಕ್ತಿಯಾಗಿ ಶ್ರಮಿಸಿದ ಉಪನ್ಯಾಸಕ ವಿಭಾಗದ ಆಶಾಲತಾ, ಲವಿನಾ ಮಿನೇಜಸ್, ವಸುದೀಪ್, ಲಕ್ಷ್ಮೀದೇವಿ, ವಿಷ್ಣು ಟ್, ಸುಂದರ ಮೇರ ಅವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಯಾಗಿ ಕುತ್ಯಾರು ಕಿಶೋರ್ ಕುಮಾರ್, ಸಂಪನ್ಮೂಲ ವ್ಯಕ್ತಿ ಜೈಕಿಶನ್ ಭಟ್ ಮಂಗಳೂರು, ಉಪನ್ಯಾಸಕ ವಿಷ್ಣು ಭಟ್, ವಸುದೀಪ್ ಮತನಾಡಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸೊರ್ಕಳ ಚ್ಚಿದಾನಂದ ಹೆಗೆ ಉಪಸ್ಥಿತರಿದ್ದರು.

ಪ್ರಭಾರ ಪ್ರಾಂಶುಪಾಲ ಭಾಸ್ಕರ್ ಸ್ವಾಗತಿಸಿದರು. ಲಕ್ಷ್ಮೀದೇವಿ ಹಾಗೂ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಫ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಕಿಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News