ಕಂಚಿನಡ್ಕ ಮದ್ರಸ ಕಟ್ಟಡ ಉದ್ಘಾಟನೆ

Update: 2019-04-22 14:53 GMT

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ನಿರ್ಮಾಣಗೊಂಡ ನೂರುಲ್ ಹುದಾ ಮದ್ರಸ ಕಟ್ಟಡದ ಉದ್ಘಾಟನೆಯು ಸೋಮವಾರ ನಡೆಯಿತು.

ಕಿಲ್ಲೂರು ಜುಮಾ ಮಸೀದಿಯ ಖತೀಬ್ ಅಲ್‍ಹಾಜ್ ಅಸಯ್ಯದ್ ಶಿಹಾಬುದ್ದೀನ್ ಹೈದ್ರೋಸ್ ತಂಙಳ್ ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣಕ್ಕೆ ಇಸ್ಮಾಂ ಧರ್ಮ ಬಹಳಷ್ಟು ಮಹತ್ವವನ್ನು ನೀಡಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರು ಶಿಕ್ಷಣ ಪಡೆದುಕೊಳ್ಳುವುದು ಅಗತ್ಯ. ಧಾರ್ಮಿಕ ಶಿಕ್ಷಣದಿಂದ ಜೀವನ ಶೈಲಿಯ ಕ್ರಮವನ್ನು ಪಡೆದುಕೊಳ್ಳಬಹುದು ಎಂದರು.

ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಂ. ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಜುಮ್ಮಾ ಮಸೀದಿ ಖತೀಬ್ ಅಲ್ಹಾಜ್ ಎಸ್.ಎಂ. ಅಬ್ದುಲ್ ರಹ್ಮಾನ್ ಮದನಿ ದುವಾ ನೆರವೇರಿಸಿದರು.

ಕಂಚಿನಡ್ಕ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ಸದರ್ ಉಸ್ತಾದ್ ಅಶ್ರಫ್ ಸಅದಿ, ನೂರಾನಿಯಾ ಮಸೀದಿಯ ಹಾಜಿ ಮುಹಮ್ಮದ್ ಇಕ್ಬಾಲ್ ನೂರಿ, ಹಿಮಾಯತುಲ್ ಇಸ್ಲಾಂ ಸಂಘದ ಸಂಚಾಲಕ ಶಬ್ಬೀರ್ ಹುಸೇನ್, ಎಂಜಿನಿಯರ್ ಮುಹಮ್ಮದ್ ಸುಲೈಮಾನ್, ಸಮಾಜ ಸೇವಕ ಹಸನ್ ಬಾವಾ, ಮಸೀದಿ ಸಮಿತಿಯ ಕೋಶಾಧಿಕಾರಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಸ್ವಾಗತಿಸಿದರು. ರಝಾಕ್ ಕಂಚಿನಡ್ಕ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News