ಕಾಪು ಕಡಲ ಕಿನಾರೆಯಲ್ಲಿ ಸಮಯ ಕಳೆದ ಮುಖ್ಯಮಂತ್ರಿ ಕುವಾರಸ್ವಾಮಿ

Update: 2019-04-22 16:09 GMT

ಕಾಪು, ಎ.22: ಇಲ್ಲಿಗೆ ಸಮೀಪದ ಮೂಳೂರಿನ ಸಾಯಿರಾಧ ಹೆರಿಟೇಜ್ ರೆಸಾರ್ಟ್‌ನಲ್ಲಿ ವಿಶ್ರಾಂತಿಯಲ್ಲಿರುವ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಸುಮಾರು ಎರಡು ತಾಸುಗಳ ಕಾಲ ಕಾಪು ಕಡಲ ತೀರದಲ್ಲಿ ಕಳೆದಿದ್ದಾರೆ.

ರವಿವಾರ ರಾತ್ರಿ ಮೂಳೂರಿಗೆ ಆಗಮಿಸಿದ ಕುಮಾರಸ್ವಾಮಿ ಎರಡು ದಿನಗಳ ಕಾಲ ಸಾಯಿರಾಧ ಹೆಲ್ತ್ ರೆಸಾರ್ಟ್‌ನಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯಲಿದ್ದಾರೆ. ನಿನ್ನೆ ತಡರಾತ್ರಿವರೆಗೂ ಕಾರ್ಯಕರ್ತರೊಂದಿಗೆ ಸಮಾ ಲೋಚನೆ ನಡೆಸಿದ ಮುಖ್ಯಮಂತ್ರಿ, ಇಂದು ಯಾವುದೇ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿಲ್ಲ. ಹೀಗಾಗಿ ರೆಸಾರ್ಟ್ ಆವರಣದಲ್ಲಿ ಕಾರ್ಯಕರ್ತ ರು ಯಾರು ಕೂಡ ಕಂಡುಬಂದಿಲ್ಲ.

ಬೆಳಗ್ಗೆ ಸಮುದ್ರ ಕಿನಾರೆಯಲ್ಲಿ ವಾಕಿಂಗ್ ಮಾಡಿದ ಕುಮಾರಸ್ವಾಮಿ ಬಳಿಕ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದರು. ಸಂಜೆ ವೇಳೆ ಮತ್ತೆ ವಾಕಿಂಗ್ ಹೊರಡಲು ಮುಂದಾದ ಮುಖ್ಯಮಂತ್ರಿ, ಅಲ್ಲಿ ಜೆಡಿಎಸ್ ಕಾರ್ಯಕರ್ತರ ದಂಡು ನೆರೆ ದಿರುವುದನ್ನು ತಿಳಿದು ವಾಕಿಂಗ್ ರದ್ದುಗೊಳಿಸಿದರೆಂದು ತಿಳಿದುಬಂದಿದೆ.

ಬೆಳಗಿನ ಉಪಹಾರಕ್ಕೆ ಇಡ್ಲಿ-ವಡೆ, ನೀರ್‌ದೋಸೆ, ಪೂರಿ ಸೇವಿಸಿದ ಸಿಎಂ, ಮಧ್ಯಾಹ್ನ ಸಸ್ಯಾಹಾರ ಭೋಜನ ಸವಿದರೆಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಕಾಲ ರೆಸಾರ್ಟ್‌ನಲ್ಲಿ ಉಳಿದುಕೊಳ್ಳಲಿರುವ ಮುಖ್ಯಮಂತ್ರಿ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದಾರೆ.

ಮುಖ್ಯಮಂತ್ರಿಯ ಬೇಡಿಕೆಯಂತೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದ್ದು, ಖ್ಯಾತ ಆರ್ಯುವೇದ ವೈದ್ಯ ಡಾ.ತನ್ಮಯ ಗೋಸ್ವಾಮಿ ಅವರ ಸೂಚನೆಯಂತೆ ಮುಖ್ಯಮಂತ್ರಿಗೆ ಪ್ರಕೃತಿ ಚಿಕಿತ್ಸೆ ನಡೆಯಲಿದೆ. ಮುಖ್ಯಮಂತ್ರಿಯ ಈ ಖಾಸಗಿ ಭೇಟಿಯನ್ನು ಸಂಪೂರ್ಣ ರಹಸ್ಯ ವಾಗಿರಿಸಿಕೊಂಡಿದ್ದು, ಮಾಧ್ಯಮದವರಿಂದ ಸಂಪೂರ್ಣ ದೂರ ಉಳಿದುಕೊಂಡಿದ್ದಾರೆ.

ರೆಸಾರ್ಟ್‌ನಲ್ಲಿ ಕುಮಾರಸ್ವಾಮಿ ಅವರೊಂದಿಗೆ ಸಚಿವರಾದ ಸಾರಾ ಮಹೇಶ್, ಶ್ರೀನಿವಾಸ್, ಶಾಸಕ ಶಿವಲಿಂಗೇ ಗೌಡ, ಜೆಡಿಎಸ್ ಮುಖಂಡ ರಾದ ಅಪ್ಪಾಜಿ ಗೌಡ, ಬೋಜೇಗೌಡ, ಕಾಂತರಾಜ್, ಚೌಡ ರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದಲಾದವರು ಹಾಜರಿದ್ದರು.

‘ಚುನಾವಣೆ ಪ್ರಚಾರದಲ್ಲಿ ತುಂಬಾ ಓಡಾಟ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಮೂಳೂರಿಗೆ ಆಗಮಿಸಿದ್ದು, ನಾಳೆ ವಾಪಾಸು ಹೊರಡಲಿದ್ದಾರೆ. ಈ ಮಧ್ಯೆ ಅವರು ಕಾಪುವಿನ ಸಮುದ್ರ ಕಿನಾರೆ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News