ಉಡುಪಿ; ದಾಸ ಪರಂಪರೆ, ಯತಿ ಪರಂಪರೆಗೆ ಸಂಪರ್ಕ ಸೇತು

Update: 2019-04-22 16:13 GMT

ಉಡುಪಿ, ಎ.22: ಶತಮಾನಗಳಿಂದಲೂ ದಾಸ ಪರಂಪರೆ ಮತ್ತು ಯತಿ ಪರಂಪರೆಗಳ ಜೊತೆಗೆ ಜೋಡಿಸಿಕೊಂಡು ಉಡುಪಿ ಸಾಂಸ್ಕೃತಿಕವಾಗಿ ಬೆಳೆದಿದೆ ಎಂದು ಖ್ಯಾತ ಲೇಖಕ, ರಂಗನಿರ್ದೇಶಕ ಪ್ರೊ.ಉದ್ಯಾವರ ಮಾಧವಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ರೀತಿಯ ಶಿಬಿರ ಮತ್ತು ಕಾರ್ಯಕ್ರಮಗಳು ಉಡುಪಿಯ ಶ್ರೀಮಂತ ಪರಂಪರೆಯನ್ನು ಉಜ್ವಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದೂ ಅವರು ಹೇಳಿದರು.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರದ ಸಮಾರೋಪ ಸಮಾರಂದಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ರೀತಿಯ ಶಿಬಿರ ಮತ್ತು ಕಾರ್ಯಕ್ರಮಗಳು ಉಡುಪಿಯ ಶ್ರೀಮಂತ ಪರಂಪರೆಯನ್ನು ಉಜ್ವಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದೂ ಅವರು ಹೇಳಿದರು.

ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಬಿರದ ನಿರ್ದೇಶಕ ಡಾ. ಮುಲ್ಲೈ ವಾಸಲ್ ಚಂದ್ರಮೌಳಿ ಮಾತನಾಡಿ, ಕನಕದಾಸರ ಸಾಹಿತ್ಯವನ್ನು ತಿಳಿದು ಕೊಳ್ಳುತ್ತ ಹೋದಂತೆ ಅವರಲ್ಲಿ ಗೌರವ ಇಮ್ಮಡಿಸುತ್ತದೆ. ಶಿಬಿರಗಳಲ್ಲಿ ವಿದ್ಯಾರ್ಥಿ ಗಳು ವಿಚಾರ, ಭಾವ ಮತ್ತು ಸಂಗೀತ ಮೂರನ್ನು ಗ್ರಹಿಸಬೇಕು ಎಂದರು.

ಬಳಿಕ ಶಿಬಿರಾರ್ಥಿಗಳಿಂದ ಹಾಡುಗಾರಿಕೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕನಕ ಅಧ್ಯಯನ ಸಂಶೋಧನ ಪೀಠದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾ ಉದಯಶಂಕರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಪ್ರೊ.ಎಂ.ಎಲ್.ಸಾಮಗ ಉಪಸ್ಥಿತರಿದ್ದರು. ಕೊನೆಯಲ್ಲಿ ಗುರುವಂದನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News