300 ತಲುಪಿದ ಸಾವಿನ ಸಂಖ್ಯೆ: 500ಕ್ಕೂ ಅಧಿಕ ಮಂದಿಗೆ ಗಾಯ

Update: 2019-04-23 15:40 GMT

ಕೊಲಂಬೊ, ಎ.22: ಶ್ರೀಲಂಕಾದ ಚರ್ಚ್‌ಗಳು ಮತ್ತು ವಿಲಾಸಿ ಹೊಟೇಲ್‌ಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 300 ತಲುಪಿದೆ ಹಾಗೂ ಸುಮಾರು 500 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು. 

ಕನಿಷ್ಠ 300 ಮಂದಿ ಮೃತಪಟ್ಟಿದ್ದು, ಅವರ ಪೈಕಿ ಹತ್ತಾರು ಮಂದಿ ವಿದೇಶಿಯರು. ಸರಣಿ ಸ್ಫೋಟಗಳಿಗೆ ಸಂಬಂಧಿಸಿ ಶ್ರೀಲಂಕಾ ಪೊಲೀಸರು 24 ಮಂದಿಯನ್ನುಬಂಧಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಸ್ಟರ್ ದಿನದಂದು ಚರ್ಚ್‌ಗಳು ಮತ್ತು ವಿಲಾಸಿ  ಹೊಟೇಲ್‌ಗಳನ್ನು ಗುರಿಯಾಗಿಸಿ  8 ಸಂಘಟಿತ  ಸ್ಫೋಟಗಳು ನಡೆದಿರುವುದನ್ನು  ಸ್ಮರಿಸಬಹುದಾಗಿದೆ. ಮೃತರಲ್ಲಿ 7 ಮಂದಿ ಭಾರತೀಯರು  ಶ್ರೀಲಂಕಾದಲ್ಲಿ ರವಿವಾರ ನಡೆದ  ಸರಣಿ ಬಾಂಬ್  ದಾಳಿಗಳಲ್ಲಿ ಮೃತರಾದ ಭಾರತೀಯರ ಸಂಖ್ಯೆ 7ಕ್ಕೆಏರಿದೆ ಎಂಬುದಾಗಿ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ. 

ಸೋಮವಾರ ಕೊಲಂಬೊದಲ್ಲಿರುವ ಭಾರತೀಯ ರಾಯಭಾರಕಚೇರಿಯು, ಮೃತಪಟ್ಟ ಭಾರತೀಯರನ್ನು ಕೆ.ಜಿ. ಹುನುಮಂತರಾಯಪ್ಪ, ಎಂ. ರಂಗಪ್ಪ, ಶಿವಣ್ಣ, ಕೆ.ಎಂ. ಲಕ್ಷ್ಮಿನಾರಾಯಣ ಮತ್ತು ಲಕ್ಷ್ಮಣಗೌಡ ರಮೇಶ್ ಎಂಬುದಾಗಿ ಗುರುತಿಸಿದೆ.ವೆಮುರಾಯ್ ತುಳಸಿರಾಮ್ ಮತ್ತು ಎಸ್. ಆರ್. ನಾಗರಾಜ್ ಅವರ ಹೆಸರುಗಳನ್ನು ಭಾರತೀಯ ರಾಯಭಾರ ಕಚೇರಿಯು ತಡವಾಗಿ ಬಿಡುಗಡೆ ಮಾಡಿದೆ.  ಐವರು ಜಾತ್ಯತೀತಜನತಾ ದಳ ಕಾರ್ಯಕರ್ತರು ಶ್ರೀಲಂಕಾದಲ್ಲಿ ಮೃತಪಟ್ಟ ಕೆ.ಜಿ. ಹುನುಮಂತರಾಯಪ್ಪ, ಎಂ. ರಂಗಪ್ಪ, ಶಿವಣ್ಣ, ಕೆ.ಎಂ. ಲಕ್ಷ್ಮಿನಾರಾಯಣ ಮತ್ತು ಲಕ್ಷ್ಮಣಗೌಡ ರಮೇಶ್ ಕರ್ನಾಟಕದಜಾತ್ಯತೀತ ಜನತಾ ದಳದ ಸದಸ್ಯರಾಗಿದ್ದರು. 

ಶ್ರೀಲಂಕಾಗೆ ಪ್ರವಾಸ ಹೋಗಿದ್ದ ಪಕ್ಷದ ಏಳು ಸದಸ್ಯರ ತಂಡದ ಭಾಗವಾಗಿದ್ದರು. ಇನ್ನಿಬ್ಬರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.  ಕರ್ಫ್ಯೂ ತೆರವು ರವಿವಾರ ಸರಣಿ ಸ್ಫೋಟಗಳ ಬೆನ್ನಿಗೇ ಶ್ರೀಲಂಕಾದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸೋಮವಾರ ಬೆಳಗ್ಗೆ ತೆರವುಗೊಳಿಸಲಾಗಿದೆ. ಅತ್ಯಂತ ವಿನಾಶಕಾರಿ ಸ್ಫೋಟ ನಡೆದಕೊಲಂಬೊದ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಭಾರೀ ಭದ್ರತಾ ವ್ಯವಸ್ಥೆ ಈಗಲೂ ಮುಂದುವರಿದಿದೆ. ಶ್ರೀಲಂಕಾದ ಸಣ್ಣ ಪ್ರಮಾಣದ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರ ವಿರುದ್ಧಹಿಂದೆಯೂ ಹಿಂಸಾಚಾರ ನಡೆದಿತ್ತು. ಆದರೆ ಈ ಮಟ್ಟದಲ್ಲಿ ಹಿಂದೆಂದೂ ನಡೆದಿರಲಿಲ್ಲ. ದೇಶದ 2.1 ಕೋಟಿ ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ ಕೇವಲ 6 ಶೇಕಡ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News