ಟ್ರೆಂಡ್ ಸಮ್ಮರ್ ಗೈಡ್ ಶೈಕ್ಷಣಿಕ ಅಭಿಯಾನ ಶ್ಲಾಘನೀಯ: ಖಾಸಿಂ ದಾರಿಮಿ

Update: 2019-04-24 06:48 GMT

ಮಂಗಳೂರು, ಎ.24: ಶೈಕ್ಷಣಿಕ ರಂಗದಲ್ಲಿ ಸಮುದಾಯದ ಕ್ರಾಂತಿಕಾರಿ ಬದಲಾವಣೆಗೆ ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಕಾರಣವಾಗಬೇಕು. ಟ್ರೆಂಡ್ ನ ಉಪಯುಕ್ತ ಸೇವೆಗಳು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಆ ಮೂಲಕ ಸಮುದಾಯದ ಸಬಲೀಕರಣದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಹತ್ತರ ಪಾತ್ರ ವಹಿಸುವಂತಾಗಲಿ. ಟ್ರೆಂಡ್ ನ ಸಮ್ಮರ್ ಗೈಡ್ ಶೈಕ್ಷಣಿಕ ಅಭಿಯಾನ ಶ್ಲಾಘನೀಯ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ಕೆಎಸ್ಸೆಸ್ಸೆಫ್  ಉಪವಿಭಾಗವಾದ ಟ್ರೆಂಡ್ ಹಮ್ಮಿಕೊಂಡಿರುವ ಸಮ್ಮರ್ ಗೈಡ್ ರಜಾ ಕಾಲ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಇತ್ತೀಚೆಗೆ ನೆರವೇರಿಸಿ ಮಾತಾಡಿದರು. 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಮಾತನಾಡಿ,  ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಗೂ ಈ ಅಭಿಯಾನದ ಸಂದೇಶ ತಲುಪುವಂತಾಗಲಿ. ಎಸ್ಕೆಎಸ್ಸೆಸ್ಸೆಫ್ ನ ಮತ್ತೊಂದು ಉಪ ವಿಭಾಗವಾದ ಕ್ಯಾಂಪಸ್ ವಿಂಗ್ ಈ ಅಭಿಯಾನದಲ್ಲಿ ಜಂಟಿಯಾಗಿ ಭಾಗವಹಿಸುವ ಮೂಲಕ ಹೊಸದಾಗಿ ಕಾಲೇಜು ಪ್ರವೇಶಿಸಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಸಮ್ಮರ್ ಗೈಡ್ ಅಭಿಯಾನದ ಪ್ರಯೋಜನ ಸಿಗುವಂತಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.

ಜಿಲ್ಲಾ ಟ್ರೆಂಡ್ ಅಧ್ಯಕ್ಷ ಅಬ್ದುಲ್ ಹಮೀದ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಸಂಚಾಲಕ ಕೆ.ಎಂ.ಇಕ್ಬಾಲ್ ಬಾಳಿಲ ಹಾಗೂ  ಮುಹಮ್ಮದ್ ಕುಂಞಿ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು

ಸಮದ್ ಸಾಲೆತ್ತೂರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು . ಆರಿಫ್ ಬಡಕಬೈಲ್ ಸ್ವಾಗತಿಸಿ ವಂದಿಸಿದರು

ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಂಗ್ ಹಾಗೂ ಟ್ರೆಂಡ್ ಜಿಲ್ಲಾ ನಾಯಕರು ಮತ್ತು ಸದಸ್ಯರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News