×
Ad

ಮುಡಿಪು ಡಿವಿಶನ್; ಓರ್ಬಿಟ್ ಕ್ಯಾರಿಯರ್ ಗೈಡೆನ್ಸ್ ಕಾರ್ಯಾಗಾರ

Update: 2019-04-24 16:40 IST

ಮುಡಿಪು, ಎ.24: ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರವು ಮಂಜನಾಡಿಯ ಅಲ್ ಮದೀನ ಕ್ಯಾಂಪಸ್ ನಲ್ಲಿಂದು ನಡೆಯಿತು. 

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಅಧ್ಯಕ್ಷ ತೌಸೀಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಉದ್ಘಾಟಿಸಿದರು.

ಮುಡಿಪು ಡಿವಿಶನ್ ಈವೆಂಟ್ಸ್ ಮತ್ತು ಟ್ರೈನಿಂಗ್ ಕನ್ವೀನರ್ ಮನ್ಸೂರ್ ಹಿಮಮಿ ಮೊಂಟೆಪದವು ಮತ್ತು ನಾಸಿರ್ ಬಜ್ಪೆ ಕೆರಿಯರ್ ಗೈಡನ್ಸ್ ಬಗ್ಗೆ ತರಗತಿ ನಡೆಸಿದರು.

ಅಲ್-ಮದೀನ ಮುದರ್ರಿಸ್ ಅಬ್ದುಸ್ಸಲಾಂ ಅಹ್ಸನಿ ಹಾಗೂ ಅಬ್ದುರ್ರಝಾಕ್ ಮಾಸ್ಟರ್ ನಾವೂರು ಶುಭ ಹಾರೈಸಿದರು.

ಮುಡಿಪು ಡಿವಿಶನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಸ್ವಾಗತಿಸಿದರು. ಡಿವಿಶನ್ ವಿಸ್ಡಂ ಕನ್ವೀನರ್ ಶರೀಫ್ ಪಾನೇಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News