ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

Update: 2019-04-24 12:40 GMT

ಕೊಣಾಜೆ: ದೇರಳಕಟ್ಟೆಯ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ಪಲಿತಾಂಶ ಪಡೆದಿದೆ. ಕಾಲೇಜಿಗೆ ಶೇ. 99% ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಒಟ್ಟು 105 ವಿದ್ಯಾರ್ಥಿಗಳಲ್ಲಿ 104 ಮಂದಿ ಉತ್ತೀರ್ಣರಾಗಿದ್ದಾರೆ.

17 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 82 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಫಾತಿಮತ್ತುಲ್ ಮುಬೀನಾ ಶೇ. 96.33, ವಿಜ್ಞಾನ ವಿಭಾಗದಲ್ಲಿ ಸಫೀನಾ ಜೈನಾಬ ಶೇ. 92.3 ಉತ್ತಮ ಫಲಿತಾಂಶಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News