ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತದಾನಕ್ಕೆ ಶೇ.83 ಎಪಿಕ್ ಬಳಕೆ

Update: 2019-04-24 15:56 GMT

ಮಣಿಪಾಲ, ಎ. 24: ಕಳೆದ ಎ.18ರಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆದ ಮತದಾನದ ವೇಳೆ ಶೇ.83ರಷ್ಟು ಮತದಾರರು ಎಪಿಕ್ ಕಾರ್ಡ್‌ನ್ನು ಹಾಜರು ಪಡಿಸಿ ಮತದಾನ ಮಾಡಿದ್ದು, ಉಳಿದ ಶೇ.17ರಷ್ಟು ಮಂದಿ ಕೇಂದ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಇತರ ದಾಖಲೆಗಳನ್ನು ಹಾಜರು ಪಡಿಸಿ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾದಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮತದಾನದ ಸಂಪೂರ್ಣ ವಿವರಗಳನ್ನು ನೀಡುತ್ತಾ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇರುವ ಒಟ್ಟು 15,13,231 ಮತದಾರರ ಪೈಕಿ 11,48,700 ಮಂದಿ (ಶೇ.75.91) ಮತ ಚಲಾಯಿಸಿದ್ದು, ಇವರಲ್ಲಿ 9,54,030 ಮಂದಿ ಎಪಿಕ್ ಕಾರ್ಡ್ ಬಳಸಿ ಮತದಾನ ಮಾಡಿದ್ದರೆ, 1,94,670 ಮಂದಿ ಇತರ ದಾಖಲೆಗಳನ್ನು ತೋರಿಸಿ ತಮ್ಮ ಮತ ಚಲಾಯಿಸಿದ್ದಾರೆ ಎಂದರು.

ಎಪಿಕ್ ಕಾರ್ಡ್ ಬಳಕೆಗೆ ಜನರಲ್ಲಿ ಅರಿವು ಮೂಡಿರುವುದು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯ ಪ್ರಯತ್ನಕ್ಕೆ ದೊರೆತ ಸಫಲತೆಯಾಗಿದೆ ಎಂದವರು ಹೇಳಿದರು. ಕ್ಷೇತ್ರದ ಒಟ್ಟು 1837 ಮತಗಟ್ಟೆಗಳಲ್ಲಿ ಇರುವ 7,38,503 ಮಂದಿ ಪುರುಷ ಮತದಾರರಲ್ಲಿ 5,63,050 (ಶೇ.76.24) ಹಾಗೂ 7,74,674 ಮಹಿಳಾ ಮತದಾರರಲ್ಲಿ 5,85,645 (ಶೇ.75.60) ಮಂದಿ ಮತ ಚಲಾಯಿಸಿದ್ದಾರೆ. ಒಟ್ಟು 54 ಇತರೆ ಮತದಾರರಲ್ಲಿ ಐವರು (ಶೇ.9.26) ಮತ ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ವ್ಯಾಪ್ತಿಯಲ್ಲಿ ಶೇ.77.66ರಷ್ಟು ಮತದಾನವಾಗಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾನ ಮಂಗಳವಾರ ನಡೆದಿದ್ದು, ಇಲ್ಲಿ ಶೇ.75.23ರಷ್ಟು ಮತದಾನವಾಗಿದೆ. 1,10.237 ಪುರುಷ ಮತದಾರರಲ್ಲಿ 78,719(ಶೇ.71.41) ಮಂದಿ, 1,16,349 ಮಹಿಳಾ ಮತದಾರರಲ್ಲಿ 91,740 ಮಂದಿ (ಶೇ.78.85), ಇರುವ ಏಕೈಕ ಇತರೆ ಮತದಾರ ಮತಚಲಾಯಿಸಿದ್ದು, ಇಲ್ಲಿರುವ ಒಟ್ಟು 246 ಮತಗಟ್ಟೆಗಳಲ್ಲಿರುವ 2,26,587 ಮತದಾರರಲ್ಲಿ1,70,460 ಮಂದಿ ಮತ ಚಲಾಯಿಸಿ ಶೇ.75.23 ಸಾಧನೆ ಮಾಡಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಚಲಾಯಿಸಲಾದ ಮತಗಳ ವಿವರ ಹೀಗಿದೆ. 119.ಕುಂದಾಪುರ ಕ್ಷೇತ್ರ: 74119 ಪುರುಷರು (ಶೇ.75.87), 83,743 ಮಹಿಳೆಯರು (ಶೇ.78.31), ಇತರೆ 1(ಶೇ.50), ಒಟ್ಟು 1,57,863 (ಶೇ.77.66).
120.

ಉಡುಪಿ ಕ್ಷೇತ್ರ: 79393 ಪುರುಷರು (ಶೇ.78.31), 85640 ಮಹಿಳೆಯರು (ಶೇ.79.21), ಇತರೆ 0(ಶೇ.0), ಒಟ್ಟು 1,65,033 (ಶೇ.78,77).
121.

ಕಾಪು ಕ್ಷೇತ್ರ: 67,320 ಪುರುಷರು (ಶೇ.76.76), 76,083 ಮಹಿಳೆಯರು (ಶೇ.78.94), ಇತರೆ 0(0), ಒಟ್ಟು 1,43,403(77.89).
122.

ಕಾರ್ಕಳ ಕ್ಷೇತ್ರ: 68,300 ಪುರುಷರು (77.69), 75,565 ಮಹಿಳೆಯರು (79.03), ಇತರೆ 0(0), ಒಟ್ಟು 1,43,865(ಶೇ.78.39).
123.

ಶೃಂಗೇರಿ ಕ್ಷೇತ್ರ: 65,481 ಪುರುಷರು (80.24), 65,028 ಮಹಿಳೆಯರು (77.52), ಇತರೆ0(0), ಒಟ್ಟು 1,30,509(78.86).
124.

ಮೂಡಿಗೆರೆ ಕ್ಷೇತ್ರ: 63,772 ಪುರುಷರು (76.78), 62,452 ಮಹಿಳೆಯರು (72.86), ಇತರೆ1(11.11), ಒಟ್ಟು 1,26,225(74.79).
125.

ಚಿಕ್ಕಮಗಳೂರು ಕ್ಷೇತ್ರ: 75,893 ಪುರುಷರು(70.95), 73,392 ಮಹಿಳೆಯರು (67.97), ಇತರೆ3(13.04), ಒಟ್ಟು 1,49,288(69.45).
126.

ತರಿಕೆರೆ ಕ್ಷೇತ್ರ: 68,772 ಪುರುಷರು(74.60), 63,742(69.74), ಇತರೆ 0(0), ಒಟ್ಟು 1,32,514(72.18).
ಒಟ್ಟು: 5,63,050 ಪುರುಷರು(76.24), 5,85,645 ಮಹಿಳೆಯರು, ಇತರೆ 5(9.26), ಒಟ್ಟು 11,48,700(75.91).

ಸಖಿ ಮತಗಟ್ಟೆಗಳಲ್ಲಿ ಶೇ.72: ಕ್ಷೇತ್ರದಲ್ಲಿ ತೆರೆಯಲಾದ 40 ಮತಗಟ್ಟೆಗಳಲ್ಲಿ ಶೇ.72.05ರಷ್ಟು ಮತದಾನವಾಗಿದೆ. ಇಲ್ಲಿನ ಮತಗಟ್ಟೆಗಳ ಲ್ಲಿರುವ ಒಟ್ಟು 37374 ಮತದಾರರ ಪೈಕಿ 26930 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟು ನಾಲ್ಕು ವಿಕಲಚೇತನರ ಮತಗಟ್ಟೆಗಳಲ್ಲಿ ಆದ ಮತದಾನದ ಪ್ರಮಾಣ ಶೇ.75.85 ಆಗಿದೆ. ಹಾಗೂ ಕ್ಷೇತ್ರದ ಮೂರು ಎಥಿನಿಕ್ ಮತಗಟ್ಟೆಗಳಲ್ಲಿ ಶೇ.80.95ವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಟೆಂಡರ್ ಮತಗಳು ಹಾಗೂ ಒಂದು ಚಾಲೆಂಜಡ್ ಮತಗಳು ದಾಖಲಾಗಿವೆ ಎಂದವರು ವಿವರಿಸಿದರು.

ಬೈಂದೂರು ಕ್ಷೇತ್ರದ ಮತದಾನವಾದ ಮತಯಂತ್ರಗಳನ್ನು ಇಂದು ಸೂಕ್ತ ಬಂದೋಬಸ್ತ್ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತಎಣಿಕೆ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿನ ಚುನಾವಣಾ ವೀಕ್ಷಕರ ಸಮಕ್ಷಮ ಮತದಾರರ ರಿಜಿಸ್ಟರ್ ಪರಿಶೀಲನೆ ಪೂರ್ಣಗೊಂಡಿದೆ ಎಂದರು.

ಉಡುಪಿ ಶಿವಮೊಗ್ಗ ಕ್ಷ್ಝೇತ್ರದ ಮತಯಂತ್ರಗಳು ಹಾಗೂ ಸಂಬಂಧಿತ ಇತರ ಮತದಾನ ದಾಖಲೆಗಳನ್ನು ಉಡುಪಿಯ ಮತ ಎಣಿಕೆ ಕೇಂದ್ರವಾದ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ಚುನಾವಣಾ ವೀಕ್ಷಕರು ಹಾಗೂ ಅಭ್ಯರ್ಥಿಗಳ ಸಮಕ್ಷಮದಲ್ಲಿ ಸುರಕ್ಷಿತವಾಗಿರಿಸಿ ಡಬಲ್ ಲಾಕ್ ಮಾಡಿ ಮೊಹರು ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News