ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ: ಎಸ್ಪಿ

Update: 2019-04-24 17:07 GMT

ಉಡುಪಿ, ಎ.24: ಮಂಗಳವಾರ ಶಿವಮೊಗ್ಹ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಶಾಂತಿಯುತವಾಗಿ, ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಕ್ತಾಯಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಚುನಾವಣಾ ಬಂದೋಬಸ್ತ್‌ಗೆ ಕೆಎಸ್‌ಆರ್‌ಪಿ ನಾಲ್ಕು ತುಕಡಿ, ಇಂಡೋ ಟಿಬೇಟಿಯನ್ ಪೊಲೀಸ್ ಎರಡು ಕಂಪೆನಿಯೊಂದಿಗೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳು ನಿಯೋಜಿತರಾಗಿದ್ದರು. ಇವರೊಂದಿಗೆ ಗೃಹರಕ್ಷಕ ದಳ, ವಿಜಯಪುರ, ಬೆಳಗಾವಿ ಹಾಗೂ ಅರಣ್ಯರಕ್ಷಕ ಪಡೆಗಳ ಸಿಬ್ಬಂದಿಗಳು ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದರು ಎಂದರು.

ನಿನ್ನೆ ಬೈಂದೂರು ಕ್ಷೇತ್ರದ ಚುನಾವಣೆ ವೇಳೆ ಶಿವಮೊಗ್ಹದಿಂದ ಬಂದ ಪೊಲೀಸ್ ಸಿಬ್ಬಂದಿಗಳಲ್ಲದೇ ಗೋವಾ, ಕೆಎಸ್‌ಆರ್‌ಪಿ ಎರಡು ಫ್ಲಟೂನ್ ಕಾರ್ಯನಿರತವಾಗಿತ್ತು ಎಂದರು.

ನಿನ್ನೆ ಡಿಮಸ್ಟರಿಂಗ್ ಬಳಿಕ ಮತಯಂತ್ರಗಳನ್ನು ಕುಂದಾಪುರದ ಡಿವೈಎಸ್ಪಿ ದಿನೇಶ್ ಕುಮರ್ ನೇತೃತ್ವದಲ್ಲಿ ಪೊಲೀಸ್ ತಂಡ ಮೂರು ಕಂಟೈನರ್‌ಗಳಲ್ಲಿ ಬಿಗು ಭದ್ರತೆಯೊಂದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಒಪ್ಪಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News