ಅಕ್ಷಯ್ ಕುಮಾರ್ ನಡೆಸಿದ ನರೇಂದ್ರ ಮೋದಿಯ 'ರಾಜಕೀಯೇತರ' ಸಂದರ್ಶನದ ಹೋಳುಗಳನ್ನು ರವೀಶ್ ಕುಮಾರ್ ಚಪ್ಪರಿಸಿದ್ದು ಹೀಗೆ !

Update: 2019-04-25 10:37 GMT

ಬುಧವಾರ ಖ್ಯಾತ ನಟ ಅಕ್ಷಯ ಕುಮಾರ್ ಅವರು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ' ರಾಜಕೀಯೇತರ ' ಸಂದರ್ಶನ ಭಾರೀ ಸುದ್ದಿ ಮಾಡಿತು. ಮೋದಿ ಅಭಿಮಾನಿಗಳು ಸಂದರ್ಶನದ ಒಂದೊಂದು ಪ್ರಶ್ನೆಗಳನ್ನು ಹೆಕ್ಕಿಕೊಂಡು ಚಪ್ಪರಿಸಿದರೆ ಉಳಿದವರಿಗೆ ಈ ರೀತಿಯ ಸಂದರ್ಶನವೂ ನಡೆಯುತ್ತದೆಯೇ ಎಂಬ ಪ್ರಶ್ನೆ ಕಾಡಿತು. ದೇಶ ಮಹಾಚುನಾವಣೆಯ ನಡುವೆ ಇರುವಾಗ ಮೋದಿ ಅವರು ತಿನ್ನುವ ಮಾವಿನ ಹಣ್ಣು, ಅವರು ತೊಡುವ ಬಟ್ಟೆ ಬರೆ , ಅವರ ನಿದ್ರೆ ಇತ್ಯಾದಿಗಳ ಬಗ್ಗೆಯೇ ಒಂದು ಸಂದರ್ಶನ ಯಾವುದಕ್ಕಾಗಿ ಎಂಬ ಪ್ರಶ್ನೆಯನ್ನೂ ಹಲವರು ಕೇಳಿದರು. ರವೀಶ್ ಕುಮಾರ್ ( ಎನ್ಡಿಟಿವಿ ಪತ್ರಕರ್ತ ) ಅವರಿಗೆ ಸಂದರ್ಶನ ಕೊಡಿ ಎಂದರೆ ಮೋದಿ ಅವರು ಅಕ್ಷಯ್ ಕುಮಾರ್ ಗೆ ಕೊಟ್ಟಿದ್ದಾರೆ ಎಂದು ಇನ್ನೂ ಹಲವರು ಕುಹಕವಾಡಿದರು. 

ಇದನ್ನೆಲ್ಲಾ ಗಮನಿಸಿ ರವೀಶ್ ಕುಮಾರ್ ತಮ್ಮ ಎನ್ಡಿಟಿವಿ ಇಂಡಿಯಾ ಚಾನಲ್ ನಲ್ಲಿ ಪ್ರತಿರಾತ್ರಿ ನಡೆಸುವ ಪ್ರೈಮ್ ಟೈಮ್ ಕಾರ್ಯಕ್ರಮವನ್ನೇ ಬದಲಾಯಿಸಿ ' ರಾಜಕೀಯೇತರ ' ಪ್ರೈಮ್ ಟೈಮ್ ನಡೆಸಿಕೊಟ್ಟರು. ಹಾಸ್ಯದ ಧಾಟಿಯಲ್ಲೇ ಅವರು ಹೇಳಿದ ಮಾತುಗಳಲ್ಲಿ ಹಾಗು ಕೇಳಿದ ಪ್ರಶ್ನೆಗಳಲ್ಲಿ ಮಾತ್ರ ಮೋದಿ , ಅವರ ಅಭಿಮಾನಿಗಳು ಹಾಗು ಅಕ್ಷಯ್ ಕುಮಾರ್ ಗೆ ಹಲವು 'ಚುಚ್ಚುಮದ್ದು' ಗಳಿದ್ದವು. 

ಆ ರಾಜಕೀಯೇತರ ಷೋ ಇಲ್ಲಿದೆ ನೋಡಿ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News