ಮಾರುತಿ ಸುಝುಕಿಯಿಂದ ಮಹತ್ವದ ಘೋಷಣೆ: ಕಾರು ಖರೀದಿಸುವವರು ತಕ್ಷಣ ಗಮನಿಸಿ

Update: 2019-04-25 11:54 GMT

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆ ಮಾರುತಿ ಸುಝುಕಿ ಗುರುವಾರ ಮಹತ್ವದ ಘೋಷಣೆ ಮಾಡಿದೆ. 2020 ರ ಎಪ್ರಿಲ್ 1 ರ ಬಳಿಕ ಮಾರುತಿ ಡೀಸೆಲ್ ವಾಹನಗಳ ತಯಾರಿಕೆಯನ್ನು ನಿಲ್ಲಿಸಲಿದೆ. ಅದೇ ದಿನದಿಂದ ವಾಹನಗಳು ಹೊರಸೂಸುವ ಅನಿಲಗಳ ಕುರಿತ ಹೊಸ BS 6 ನಿಯಮಗಳು ಜಾರಿಗೆ ಬರಲಿವೆ. ಈಗಿರುವ ಡೀಸೆಲ್ ಇಂಜಿನ್ ಗಳನ್ನು ಈ ಹೊಸ ನಿಯಮಗಳಿಗೆ ಅನುಸಾರವಾಗಿ ಮೇಲ್ದರ್ಜೆಗೇರಿಸಲು ತಗಲುವ ಖರ್ಚು ವೆಚ್ಚಗಳನ್ನು ಗಮನಿಸಿ ಕಂಪೆನಿ ಈ ನಿರ್ಧಾರಕ್ಕೆ ಬಂದಿದೆ. 

ಡೀಸೆಲ್ ವಾಹನಗಳ ಅನುಪಸ್ಥಿತಿಯನ್ನು ಸರಿದೂಗಿಸಲು ಮಾರುತಿ ಸಿ ಎನ್ ಜಿ ಹಾಗು ಹೈಬ್ರಿಡ್ ತಂತ್ರಜ್ಞಾನದಿಂದ ಚಲಾಯಿಸುವ ವಾಹನಗಳ ತಯಾರಿಕೆ ಬಗ್ಗೆ ಗಮನ ಹರಿಸಲಿದೆ ಎಂದು ಹೇಳಲಾಗಿದೆ. 

ಮುಂದಿನ ವರ್ಷದ ಎಪ್ರಿಲ್ ಬಳಿಕ ಡೀಸೆಲ್ ವಾಹನ ತಯಾರಿಕೆಯ ಭಾರೀ ವೆಚ್ಚ ಗ್ರಾಹಕರಿಗೆ ಭರಿಸಲು ಸಾಧ್ಯವಾಗದೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾರುತಿ ಅಧ್ಯಕ್ಷ ಆರ್ ಸಿ ಭಾರ್ಗವ ಹೇಳಿದ್ದಾರೆ. ನೀವು ಮಾರುತಿ ಡೀಸೆಲ್ ವಾಹನದ ಅಭಿಮಾನಿಯಾಗಿದ್ದರೆ ಅದನ್ನು ಖರೀದಿಸಲು ನಿಮಗಿನ್ನು ಒಂದು ವರ್ಷದ ಸಮಯವಿದೆ ಎಂದು ಅವರು ಗ್ರಾಹಕರಿಗೆ ಹೇಳಿದ್ದಾರೆ. 

ದೇಶದ ಕಾರು ಮಾರುಕಟ್ಟೆಯಲ್ಲಿ ಮಾರುತಿ 50% ಪಾಲುಹೊಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News