ಬಸವರಾಜ ಕಟ್ಟಿಮನಿ ಜನ್ಮಶತಮಾನೋತ್ಸವ: ಕಟ್ಟಿಮನಿ ಕಥೆ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Update: 2019-04-25 14:34 GMT

ಉಡುಪಿ, ಎ.25: ಕನ್ನಡದ ಖ್ಯಾತನಾಮ ಪ್ರಗತಿಶೀಲ ಲೇಖಕ, ಕಾದಂಬರಿ ಕಾರ, ಕಥೆಗಾರ ಬಸವರಾಜ ಕಟ್ಟಿಮನಿ ಅವರ ಜನ್ಮಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಬಸವರಾಜ ಕಟ್ಟಿಮನಿ ಅವರ ಸಣ್ಣ ಕಥೆಗಳನ್ನು ಕುರಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆ ಬಸವರಾಜ ಕಟ್ಟಿಮನಿ ಅವರ ಸಣ್ಣಕಥೆಗಳನ್ನು ಮಾತ್ರ ಕುರಿತದ್ದಾಗಿದೆ. ಅವರ ಎಲ್ಲ ಕಥೆಗಳನ್ನು, ಅವುಗಳ ವಸ್ತು, ಧೋರಣೆ, ಪಾತ್ರಗಳು, ಕಥಾಸಂವಿಧಾನ, ಒಟ್ಟು ಪರಿಣಾಮ ಮತ್ತು ವರ್ತಮಾನಕ್ಕೆ ಆ ಕಥೆಗಳು ಪ್ರಸ್ತುತವಾಗುವ ರೀತಿ-ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕವಾಗಿ ಅವಲೋಕಿಸುವ ಪ್ರಬಂಧ ಇದಾಗಿರಬೇಕು. ಪ್ರಬಂಧವು ಸ್ವತಂತ್ರವಾಗಿ ಬರೆದುದಾಗಿರಬೇಕು. ಸ್ಪರ್ಧೆಯಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಇಲ್ಲಿ ವಯೋಮಾನದ ನಿರ್ಬಂಧವಿಲ್ಲ ಮತ್ತು ಪ್ರವೇಶ ಧನವಿಲ್ಲ.

ಪ್ರಬಂಧವು ಕಟ್ಟಿಮನಿ ಅವರ ಕೆಲವೇ ಕಥೆಗಳನ್ನು ಕುರಿತಾಗಿರದೇ, ಅವರ ಎಲ್ಲ ಕಥೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿ ಬರೆದುದಾಗಿರಬೇಕು. ಅಂದರೆ ಇಲ್ಲಿ ಅವರ ಎಲ್ಲ ಕಥೆಗಳನ್ನು ಹೆಸರಿಸುವ ಅಗತ್ಯವಿಲ್ಲವಾದರೂ ಅವೆಲ್ಲವುಗಳ ಹಿಂದಿರುವ ಧೋರಣೆಯನ್ನು ಸಮಗ್ರವಾಗಿ ಗ್ರಹಿಸಿ ಒಟ್ಟು ನೋಟದ ರೀತಿಯಲ್ಲಿ ಕಟ್ಟಿಕೊಡುವಂತಿರಬೇಕು. ಪ್ರಬಂಧವು 2500ರಿಂದ 2700 ಶಬ್ದಗಳ ಮಿತಿಯಲ್ಲಿರಬೇಕು. ಡಿಟಿಪಿ ಮಾಡಿಸಿ, ದೋಷಗಳನ್ನು ತಿದ್ದಿದ ಲೇಖನವನ್ನೇ ಕಳಿಸಬೇಕು.

ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ವಿಮರ್ಶಾತ್ಮಕ ಪ್ರಬಂಧಗಳಿಗೆ ಪ್ರತಿಷ್ಠಾನವು ಕ್ರಮವಾಗಿ, 10,000 ರೂ. 7000 ರೂ. ಹಾಗೂ 5000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಈ ಬಹುಮಾನಗಳನ್ನು ಹೊರತುಪಡಿಸಿ, ಬಂದ ಪ್ರಬಂಧ ಗಳಲ್ಲಿ ನಿರ್ಣಾಯಕರು ಸೂಕ್ತವೆಂದು ಪರಿಗಣಿಸುವ ಇನ್ನೂ ಎರಡು ಅಥವಾ ಮೂರನ್ನು ಆಯ್ಕೆ ಮಾಡಿ ಅವುಗಳಿಗೆ ತಲಾ 2,500 ರೂ.ಗಳ ಬಹುಮಾನ ನೀಡಲಾಗುವುದು. ಆಯ್ಕೆಯಾದ ಪ್ರಬಂಧಗಳನ್ನು ಪ್ರತಿಷ್ಠಾನದಿಂದ ಗ್ರಂರೂಪದಲ್ಲಿ ಪ್ರಕಟಿಸಲಾಗುವುದು.

ಲೇಖಕರು ಜೂನ್ 30ರೊಳಗೆ ತಮ್ಮ ವಿಮರ್ಶಾತ್ಮಕ ಪ್ರಬಂಧಗಳನ್ನು ಅಧ್ಯಕ್ಷರು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರ ಗಂಧರ್ವ ರಂಗ ಮಂದಿರ, ಬೆಳಗಾವಿ ವಿಳಾಸಕ್ಕೆ ನೊಂದಾಯಿತ ಅಂಚೆಯ ಮೂಲಕ ಕಳಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ:0831-2474648ನ್ನು ಸಂಪರ್ಕಿಸು ವಂತೆ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News