ಶಕ್ತಿನಗರದಲ್ಲಿ ನೀರು ಪೋಲು : ಶಾಸಕ ವೇದವ್ಯಾಸ ಕಾಮತ್ ದಿಢೀರ್ ಭೇಟಿ

Update: 2019-04-25 14:46 GMT

ಮಂಗಳೂರು, ಎ. 25: ಶಕ್ತಿನಗರ ಸಮೀಪದ ನೀತಿನಗರದ ಮೂಲಕ ರಾಜೀವ ನಗರಕ್ಕೆ ಹೋಗುವ ದಾರಿಯಲ್ಲಿ ಪಾಲಿಕೆಯಿಂದ ನಿರ್ಮಿಸಲ್ಪಟ್ಟಿರುವ ಬೃಹತ್ ನೀರಿನ ಟ್ಯಾಂಕ್‌ನಿಂದ ನೀರು ಪೋಲಾಗುತ್ತಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕ ವೇದವ್ಯಾಸ ಕಾಮತ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಅವರು ದ.ಕ.ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಮರೋಳಿ, ಶಕ್ತಿನಗರ ಬೋಂದೆಲ್, ಪಚ್ಚನಾಡಿ, ಕುಂಜತ್ತಬೈಲ್ ತನಕ ಈ ನೀರು ಪೂರೈಕೆಯಾಗುತ್ತದೆ. ಆದರೆ ಇಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುತ್ತಿರು ವುದು ಎರಡು ತಿಂಗಳ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದರು.

ಕಳೆದ ಏಳೆಂಟು ದಿನಗಳಿಂದ ನಗರದಲ್ಲಿ ನೀರಿನ ಸಮಸ್ಯೆ ಇದೆ. ಈ ಬಾರಿ ಜನರು ನೀರಿಗಾಗಿ ಪರದಾಡುತ್ತಿರುವಾಗ ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಮೆರೆಯಬೇಕಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೇಶನಿಂಗ್ ಮುಖಾಂತರ ಕುಡಿಯಲು ನೀರು ಕೊಡಲಾಗುವುದು ಎನ್ನುವ ಕಾರಣಕ್ಕೆ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಇದರಿಂದ ಜನ ಒಂದು ಕೊಡ ನೀರಿಗಾಗಿ ಬೇರೆ ಕಡೆ ಹೋಗುತ್ತಿದ್ದಾರೆ. ಆದರೆ ಇಲ್ಲಿ ಟಾಂಕಿ, ಗೇಟ್‌ವಾಲ್ ಎಲ್ಲವೂ ಸೋರಿಕೆಯಾಗಿ ಲಕ್ಷಗಟ್ಟಲೆ ಲೀಟರ್ ನೀರು ಹರಿದು ಚರಂಡಿ ಸೇರುತ್ತಿದೆ ಎಂದು ಕಾಮತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News