ತಮಿಳುನಾಡಿನಲ್ಲಿ ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

Update: 2019-04-25 16:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ. 25: ಹೆಚ್ಚು ಶಕ್ತಿ ಪಡೆದುಕೊಂಡ ಬಳಿಕ ಬಿರುಗಾಳಿ ಚಂಡ ಮಾರುತವಾಗಿ ಪರಿವರ್ತಿತವಾಗಿ ನಿಮ್ನ ಒತ್ತಡ ಪ್ರದೇಶದ ಕಡೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ಈ ಪ್ರಕ್ರಿಯೆ ಹಿಂದೂ ಮಹಾಸಾಗರದ ಸಮಭಾಜಕ ಹಾಗೂ ಸಮೀಪದ ನೈಋತ್ಯ ಬಂಗಾಳಕೊಲ್ಲಿಯಲ್ಲಿ ನಡೆಯಲಿದೆ. ಈ ಚಂಡ ಮಾರುತ ಪಶ್ಚಿಮ ವಾಯುವ್ಯದತ್ತ ಹಾಗೂ ಅಕ್ಷಾಂಶದತ್ತ ಸಾಗಲಿದೆ ಎಂದು ಅದು ಹೇಳಿದೆ.

‘‘ಅನಂತರ 36 ಗಂಟೆಗಳಲ್ಲಿ ಅದು ನಿಮ್ನ ಒತ್ತಡ ಪ್ರದೇಶಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಬಳಿಕ ವಾಯುವ್ಯ ದಿಕ್ಕಿನಲ್ಲಿ ತಮಿಳುನಾಡಿನ ಕರಾವಳಿ ಹಾಗೂ ಶ್ರೀಲಂಕಾದ ಪೂರ್ವ ಕರಾವಳಿಯತ್ತ ಚಲಿಸಲಿದೆ. 48 ಗಂಟೆಗಳಲ್ಲಿ ಈ ಚಂಡ ಮಾರುತ ತೀವ್ರಗೊಳ್ಳಲಿದೆ’’ ಎಂದು ಇಲಾಖೆ ತಿಳಿಸಿದೆ. ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿ ತೀರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ 50-60 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News