ನಂಡೆ ಪೆಂಙಳ್ ಯೂತ್ ವಿಂಗ್ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ರಿಫಾತ್ ಎಸ್.ಎಂ.ಆರ್ ಆಯ್ಕೆ

Update: 2019-04-25 16:10 GMT
ರಿಫಾತ್, ಶಾಬಾಝ್, ಬಾಸಿತ್

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಾರಥ್ಯದಲ್ಲಿ ನಡೆಯುತ್ತಿರುವ ಮೂವತ್ತು ವರ್ಷ ಮೀರಿದ ಯುವತಿಯರ ಮದುವೆ ಅಭಿಯಾನ ‘ನಂಡೆ ಪೆಂಙಳ್’ ಇದರ ಯೂತ್ ವಿಂಗ್ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ರಿಫಾತ್ ಎಸ್.ಎಂ.ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಬಾಝ್ ಆರ್ಕಿಟೆಕ್ಟ್ ಮತ್ತು ಕೋಶಾಧಿಕಾರಿಯಾಗಿ ಬಾಸಿತ್ ಹುಸೈನ್ ಡೆಕ್ಕನ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಪತೇ ಮುಹಮ್ಮದ್ ಪುತ್ತಿಗೆ ಮತ್ತು ಹನೀನ್ ಮುಹಮ್ಮದ್, ಕಾರ್ಯದರ್ಶಿಯಾಗಿ ಹಸನ್ ಸಜ್ಜಾದ್ ಎಚ್.ಎಚ್, ಮಾಧ್ಯಮ ಕಾರ್ಯದರ್ಶಿಗಳಾಗಿ ಸಮದ್ ಸಾಮಣಿಗೆ, ಜಸ್ವೀರ್ ಅಹಮದ್, ಸಂಘಟನಾ ಕಾರ್ಯದರ್ಶಿಗಳಾಗಿ ಮುಹಮ್ಮದ್ ಜುನೈದ್, ಜಾಫರ್ ಅಮ್ಮೆಮ್ಮಾರ್, ಪ್ರಚಾರ ಕಾರ್ಯದರ್ಶಿಗಳಾಗಿ ಪಿ.ಬಿ ಮುದಸ್ಸಿರ್, ಸ್ವಾಲಿಹ್ ಬಾಂಬಿಲ ಆಯ್ಕೆಯಾಗಿದ್ದಾರೆ.

ಸಲಹೆಗಾರರಾಗಿ ಝುಬೈರ್ ಅಂಬರ್, ನಬೀಲ್ ಮೋನಾ, ಅಬ್ದುಲ್ ರಹ್ಮಾನ್ ಎ.ಆರ್, ಆಸಿಫ್ ತೋಡಾರ್ ಜುಬೈಲ್, ಸರ್ಫರಾಝ್ ಮತ್ತು ಶಾಮಿಲ್ ಅಹ್ಮದ್ ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಮುಸ್ತಫಾ ಇಂಜಿನಿಯರ್ ಅಡ್ಡೂರು, ಅಬ್ದುಲ್ ರಝೀಮ್, ಮುಹಮ್ಮದ್ ಜಮಾಲ್, ರಝಾಕ್ ಕೆ.ಎಸ್.ಎಂ, ಮುಹಮ್ಮದ್ ತೌಸೀಫ್, ಅರ್ಷದ್ ಅಹಮದ್, ರಿಝ್ವಾನ್ ಎ.ಆರ್, ಶಪೀಖ್, ಮೆಹಸೂಫ್, ಇಶಾಮ್ ಅಹಮದ್, ಫಯಾಝ್, ತುಫೈಲ್ ಕಂಕನಾಡಿ, ಸಜೀವುದ್ದೀನ್ ಮೂಲರಪಟ್ನ, ಸಲೀಂ ಟಿ.ಕೆ ಫರಂಗಿಪೇಟೆ, ಅರ್ಷದ್ ಕುಪ್ಪೆಪದವು, ಎಂ.ಎಸ್ ಸ್ವಾಲಿಹ್ ಪಿ.ಡಬ್ಲ್ಯು.ಡಿ ಮೂಲರಪಟ್ನ, ಹನೀಫ್ ಕದ್ರಿ, ನಝೀರ್ ಲುಲು, ಹಬೀಬ್ ಆಯ್ಕೆಯಾಗಿರುತ್ತಾರೆ.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಯುವಕರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನಂಡೆ ಪೆಂಙಳ್ ಯೂತ್ ವಿಂಗ್‍ಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಪ್ರಸ್ತಾವನೆಗೈದರು. ರಫೀಕ್ ಮಾಸ್ಟರ್ ‘ನಂಡೆ ಪೆಂಙಳ್, ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಿದರು.

ಟಿಆರ್ ಎಫ್ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಂಡೆ ಪೆಂಙಳ್ ಕಾರ್ಯದರ್ಶಿ ಎಸ್.ಎಂ ಮುಸ್ತಫಾ ಭಾರತ್, ನಿಸಾರ್ ಎಫ್ ಮುಹಮ್ಮದ್, ಪರಿಶೀಲನೆ ತಂಡದ ಮುಖ್ಯಸ್ಥ ಸುಲೈಮಾನ್ ಶೇಖ್ ಬೆಳುವಾಯಿ, ಸಂಚಾಲಕ ಮುಹಮ್ಮದ್ ಯು.ಬಿ, ಮಾಧ್ಯಮ ಕಾರ್ಯದರ್ಶಿ ಉಮರ್ ಯು. ಎಚ್, ಉದ್ಯಮಿಗಳಾದ ಬದ್ರುದ್ದೀನ್ ಪಣಂಬೂರು, ಸಲೀಂ ಅಲ್ತಾಫ್ ಫರಂಗಿಪೇಟೆ ಡೈಮಂಡ್, ಟಿ.ಆರ್.ಎಫ್ ಸಲಹೆಗಾರ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಹಕೀಮ್ ಪಕ್ಕಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ, ಸದಸ್ಯ ನಕಾಶ್ ಬಾಂಬಿಲ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News