ಅಡ್ಡ ಮತ ಚಲಾಯಿಸುವುದನ್ನು ಪ್ರಶ್ನಿಸಿದ ಸಿಪಿಐ ನೇತಾರನ ಮನೆಗೆ ಕಲ್ಲು ತೂರಾಟ

Update: 2019-04-25 17:05 GMT

ಮಂಜೇಶ್ವರ: ಅಡ್ಡ ಮತ ಚಲಾಯಿಸುವುದನ್ನು ಪ್ರಶ್ನಿಸಿದ ಪೂರ್ವ ದ್ವೇಶದಿಂದ ಬಿಜೆಪಿ ಕಾರ್ಯಕರ್ತರು ಮನೆಗೆ ಕಲ್ಲೆಸೆದು ಕಿಟಿಕಿಯ ಗಾಜು ಗಳನ್ನು ಪುಡಿಗೈದಿರುವುದಾಗಿ ದೂರಲಾಗಿದೆ.

ಸಿಪಿಐ ಕುಂಜತ್ತೂರು ಶಾಖಾ ಕಾರ್ಯದರ್ಶಿ ಗಣೇಶ್ ಎಂ ಎಂಬವರ ಕುಂಜತ್ತೂರು ಪದವು ರಸ್ತೆಯಲ್ಲಿರುವ ಮನೆಗೆ ಕಲ್ಲೆಸೆದು ಹಾನಿಗೊಳಿಸಲಾ ಗಿದೆ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗಿಕೊಂಡು ಎರಡು ದಿನಗಳ ಹಿಂದೆ ಇದೇ ತಂಡ ಜೀವ ಬೆದರಿಕೆಯನ್ನು ನೀಡಿರು ವುದಾಗಿ ಕೂಡಾ ಆರೋಪಿಸಲಾಗಿದೆ.

ನೇತಾರರಾದ ಬಿ ವಿ ರಾಜನ್, ಜಯರಾಂ ಬಲ್ಲಂಗುಡೇಲ್, ದಯಾಕರ ಮಾಡ, ಡಿ ಎಂ ಮುಸ್ತಫಾ, ಕೆ ಆರ್ ಜಯಾನಂದ, ಅಶ್ರಫ್ ಕುಂಜತ್ತೂರು ಸಹಿತ ಹಲವು ನೇತಾರರು ಗಣೇಶರ ಮನೆಯನ್ನು ಸಂದರ್ಶಿಸಿದರು. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವಂತೆ ಕಂದಾಯ ಸಚಿವ ಇ ಚಂದ್ರಶೇಖರನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಕಾಸರಗೋಡು ಎಲ್ ಡಿ ಎಫ್ ಅಭ್ಯರ್ಥಿ ಕೆ ಪಿ ಸತೀಶ್ಚಂದ್ರನ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News