ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾಗಿ ಬಿ.ಎ.ಮುಹಮ್ಮದ್ ಹನೀಫ್

Update: 2019-04-25 17:19 GMT
ಮುಹಮ್ಮದ್ ಹನೀಫ್

ಮಂಗಳೂರು, ಎ. 25: ಅಖಿಲ ಭಾರತ ಬ್ಯಾರಿ ಪರಿಷತ್‌ನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಜೆ. ಹುಸೈನ್ ಅವರ ಅಧ್ಯಕ್ಷತೆಯಲ್ಲಿ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಕ್ಯಾಪಿಟಲ್ ಅವೆನಿಯೂ ತಳ ಅಂತಸ್ತಿನಲ್ಲಿ ಇತ್ತೀಚೆಗೆ ನಡೆಯಿತು. ಇರ್ಫಾನ್ ಉಸ್ತಾದ್ ದುಆಗೈದರು. ಪ್ರಧಾನ ಕಾರ್ಯದರ್ಶಿ ಯುಸೂಫ್ ವಕ್ತಾರ್ ಲೆಕ್ಕಪತ್ರ ಮಂಡಿಸಿ, ವರದಿ ವಾಚಿಸಿದರು.

ಗೌರವಾಧ್ಯಕ್ಷರಾಗಿ ಜೆ. ಹುಸೈನ್, ಅಧ್ಯಕ್ಷರಾಗಿ ಬಿ.ಎ.ಮುಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಪಲ್ಲಮಜಲ್, ಕೋಶಾಧಿಕಾರಿ ಯಾಗಿ ನಿಸಾರ್ ಫಕೀರ್ ಅಹ್ಮದ್, ಉಪಾಧ್ಯಕ್ಷರಾಗಿ ಅಹ್ಮದ್ ಬಾವಾ ಬಜಾಲ್, ಶಾಹುಲ್ ಹಮೀದ್ ಮೆಟ್ರೋ, ಯು.ಎಚ್. ಖಾಲಿದ್ ಉಜಿರೆ, ಮುಹಮ್ಮದ್ ಕುಂಜತ್ತಬೈಲ್, ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಹಕ್, ಹುಸೈನ್ ಕೂಳೂರು, ಎನ್.ಇ. ಮುಹಮ್ಮದ್, ಕೆ.ಸಿ. ಹುಸೈನ್, ಹಮೀದ್ ಬೆಂಗರೆ, ಅಖ್ತರ್ ಹುಸೈನ್, ಹುಸೈನ್ ಕೈಕಂಬ, ಮುಹಮ್ಮದ್ ಬಜ್ಪೆ, ಮೂಸಬ್ಬ ಜೋಕಟ್ಟೆ, ಸಂಘಟನಾ ಕಾರ್ಯದರ್ಶಿಗಳಾಗಿ ಸಿದ್ದೀಕ್ ಫರಂಗಿಪೇಟೆ, ಉಮರ್ ಪಜೀರ್, ಬಶೀರ್ ಮೊಂಟೆಪದವು, ಯೂಸುಫ್ ಉಳ್ಳಾಲ್, ಹಬೀಬುಲ್ಲಾ ಕಣ್ಣೂರು, ಹಾರಿಸ್ ತೋಡಾರ್, ಮುಹಮ್ಮದ್ ಶರೀಫ್, ಹಸನಬ್ಬ ಮೂಡುಬಿದಿರೆ, ಮುಹಮ್ಮದ್ ಸಲೀಂ, ಅಬ್ಬಾಸ್ ಬಜಾಲ್, ಗೌರವ ಸಲಹೆಗಾರರಾಗಿ ಅಬ್ದುಲ್ ಮಜೀದ್ ಸೂರಲ್ಪಾಡಿ, ಎಫ್.ಎ. ಖಾದರ್, ಇಬ್ರಾಹೀಂ ನಡುಪದವು ಮತ್ತು ಎಂಟು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News