ಮೂಡಬಿದಿರೆ: ಎಕ್ಸಲೆಂಟ್‍ ಕಾಲೇಜಿನಲ್ಲಿ ಸಾಧಕನಿಗೆ ಸನ್ಮಾನ

Update: 2019-04-25 17:39 GMT

ಮೂಡುಬಿದಿರೆ: ’ಶ್ರಮ ಏವ ಜಯತೆ’ ಎಂಬ ಮಾತಿನಂತೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದಲ್ಲಿ ಉತ್ಕೃಷ್ಟ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಸಾಧಕ ವಿದ್ಯಾರ್ಥಿ ಮದನ್ ವೈ ಎನ್ ಅವರೇ ಸಾಕ್ಷಿ’ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಯುವರಾಜ್ ಜೈನ್‍ರ ನುಡಿದರು.

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ಮದನ್ ವೈ ಎನ್, ಇಂಡಿಯನ್ ಇನ್ಸ್ಟಿಟ್ಯೂಟ್‍ಆಫ್ ಸೈನ್ಸ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಕೆವಿಪಿವೈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಸಾಧನೆಗಾಗಿ ಆತನನ್ನು ಸನ್ಮಾನಿಸಿ ಮಾತನಾಡಿದರು.

ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಒಂದು ಲಕ್ಷರೂಪಾಯಿ ನಗದು ಪುರಸ್ಕಾರವನ್ನು ಈ ಸಂದರ್ಭದಲ್ಲಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮದನ್ ವೈ.ಎನ್ ಸರಿಯಾದ ಗುರಿ ಮತ್ತು ಗುರು ಇದ್ದರೆ ನಿರೀಕ್ಷಿತ ಯಶಸ್ಸು ದೊರಕುತ್ತದೆ. ನನ್ನ ಗುರಿಗೆ ಸದಾ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಆಡಳಿತ ಮಂಡಳಿ ಮತ್ತು ಉಪನ್ಯಾಸ ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ನುಡಿದನು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಧ್ಯಾಪಕರಾದ ಡಾ. ಪ್ರಶಾಂತ್ ಹೆಗ್ಡೆ, ಶ್ರೀ ರವೀಂದ್ರನಾಥ್ ಬರ್ವೆ, ಶ್ರೀ ದಯಾನಂದ, ಶ್ರೀ ಕೇಶವಮೂರ್ತಿ ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಯನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News