ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಪರಿಶೀಲನಾ ಸಮಿತಿಗೆ ನ್ಯಾ.ಇಂದು ಮಲ್ಹೋತ್ರಾ ಸೇರ್ಪಡೆ

Update: 2019-04-25 18:18 GMT

 ಹೊಸದಿಲ್ಲಿ,ಎ.25: ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಪರಿಶೀಲನೆಗಾಗಿ ರಚಿಸಲಾಗಿರುವ ನ್ಯಾ.ಎಸ್.ಎ.ಬೋಬ್ಡೆ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಸಮಿತಿಯಿಂದ ದೂರ ಸರಿದಿರುವ ನ್ಯಾ.ಎನ್.ವಿ.ರಮಣ ಅವರ ಸ್ಥಾನದಲ್ಲಿ ನ್ಯಾ.ಇಂದು ಮಲ್ಹೋತ್ರಾ ಅವರನ್ನು ನೇಮಕಗೊಳಿಸಲಾಗಿದೆ.

ನ್ಯಾ.ರಮಣ ಅವರು ಮು.ನ್ಯಾ.ಗೊಗೊಯಿ ಅವರ ಆಪ್ತರಾಗಿದ್ದು,ಕುಟುಂಬ ಸ್ನೇಹಿತರೂ ಆಗಿದ್ದಾರೆ,ಹೀಗಾಗಿ ತನ್ನ ಅಫಿದಾವತ ಮತ್ತು ಸಲ್ಲಿಸಿರುವ ಸಾಕ್ಷಗಳ ವಸ್ತುನಿಷ್ಠ ಮತ್ತು ನ್ಯಾಯಯುತ ಆಲಿಕೆ ನಡೆಯುವುದಿಲ್ಲ ಎಂಬ ಆತಂಕ ತನಗಿದೆ ಎಂದು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿ ಬುಧವಾರ ಉನ್ನತ ನ್ಯಾಯಾಲಯಕ್ಕೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಾಧೀಶರನ್ನು ಸೇರ್ಪಡೆಗೊಳಿಸುವಂತೆಯೂ ಆಕೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾ.ರಮಣ ಸಮಿತಿಯ ಸದಸ್ಯತ್ವದಿಂದ ದೂರ ಸರಿಯುತ್ತಿರುವದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News