ಇನ್ನು ಮುಂದೆ ಉಮ್ರಾ ಯಾತ್ರಾರ್ಥಿಗಳಿಗೆ 24 ಗಂಟೆಯೊಳಗೆ ವೀಸಾ: ಇಲ್ಲಿದೆ ಮಾಹಿತಿ

Update: 2019-04-26 11:23 GMT

ಮಂಗಳೂರು, ಎ.26: ಉಮ್ರಾ ಯಾತ್ರಾರ್ಥಿಗಳಿಗೆ ಯಾವುದೇ ಸಮಸ್ಯೆಯಿಲ್ಲದೆ ಉಚಿತ ಇ-ವೀಸಾ ಒದಗಿಸುವ ಪ್ರಕ್ರಿಯೆಯನ್ನು ಸೌದಿ ಸರಕಾರ ಎಪ್ರಿಲ್ 21ರಿಂದ ಆರಂಭಿಸಿದೆ. ಇದರನ್ವಯ ಉಮ್ರಾ ಯಾತ್ರಾರ್ಥಿಗಳು 24 ಗಂಟೆಗಳೊಳಗಾಗಿ ತಮ್ಮ ವೀಸಾ ಪಡೆಯಬಹುದಾಗಿದೆ. ಸಾಮಾನ್ಯವಾಗಿ ವೀಸಾ ಪಡೆಯಲು ಕನಿಷ್ಠ 10-12 ದಿನಗಳು ತಗಲುವುದರಿಂದ ಹೊಸ ವ್ಯವಸ್ಥೆಯಡಿ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಸೌದಿ ಸರಕಾರದಿಂದ ಅನುಮೋದಿತ ಟ್ರಾವೆಲ್ ಏಜಂಟರು 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ವೀಸಾ ಒದಗಿಸಲಿದ್ದಾರೆ. ಮಂಗಳೂರಿನ ಫಳ್ನೀರ್ ನಲ್ಲಿರುವ ಸುಹಾನಾ ಟ್ರಾವೆಲ್ಸ್ ಅಧಿಕೃತ ಏಜಂಟರಾಗಿದ್ದಾರೆ.

‘ವಾರ್ತಾ ಭಾರತಿ’ಯ ಜತೆ ಶುಕ್ರವಾರ ಮಾತನಾಡಿದ ಸುಹಾನಾ ಟ್ರಾವೆಲ್ಸ್ ಮಾಲಕ ಸೈಯದ್ ಅನ್ಸಾರ್ ತಂಙಳ್, ಇ-ವೀಸಾ ಪ್ರಕ್ರಿಯೆ ಉಮ್ರಾ ಯಾತ್ರಾರ್ಥಿಗಳಿಗೆ  ಬಹಳಷ್ಟು ಅನುಕೂಲಕರವಾಗಲಿದೆ ಹಾಗೂ ಅರ್ಜಿ ಸಲ್ಲಿಸಿದ 24 ಗಂಟೆಗಳೊಳಗೆ ಲಭ್ಯವಾಗಲಿದೆ ಎಂದರು. “ಈ ಹಿಂದೆ ಅರ್ಜಿಯನ್ನು ಮುಂಬೈ ಅಥವಾ ದಿಲ್ಲಿಯ ರಾಯಭಾರ ಕಚೇರಿಗೆ ಕಳುಹಿಸಿ ಅಲ್ಲಿಂದ ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕ್ರಿಯೆ ನಡೆಯುತ್ತಿತ್ತು. ಈಗಿನ ಪದ್ಧತಿಯಂತೆ ಒಂದು ಗಂಟೆಯೊಳಗಾಗಿ ಅಥವಾ ಗರಿಷ್ಠ 24 ಗಂಟೆಗಳಲ್ಲಿ ಇ-ವೀಸಾ ಲಭ್ಯವಾಗಲಿದೆ” ಎಂದು ಅವರು ತಿಳಿಸಿದ್ದಾರೆ.

“ಇಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲ. ಹಿಂದಿನ ಶುಲ್ಕದಲ್ಲಿಯೇ ಅದು ಲಭ್ಯವಾಗಲಿದೆ. ಆದರೆ ಅಧಿಕೃತ ಏಜಂಟರ ಮೂಲಕ ಮಾತ್ರ ಅದು ಲಭ್ಯ” ಎಂದರು.

ಉಮ್ರಾ ಯಾತ್ರೆಗೆ ತೆರಳ ಬಯಸುವವರು ತಮ್ಮ ಪಾಸ್ ಪೋರ್ಟ್, ಭಾವಚಿತ್ರ, ಮಹ್ರಮ್ ಪುರಾವೆಗಳೊಂದಿಗೆ ಅಧಿಕೃತ ಏಜಂಟರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಒಮ್ಮೆ ಯಾತ್ರೆ ಕೈಗೊಂಡು ಎರಡು ವರ್ಷಗಳೊಳಗಾಗಿ ಮತ್ತೊಮ್ಮೆ ಯಾತ್ರೆ ಕೈಗೊಳ್ಳ ಬಯಸುವವರು 2000 ಸೌದಿ ರಿಯಾಲ್ ಶುಲ್ಕ ಪಾವತಿಸಬೇಕಿದೆ (ರಿಪೀಟರ್ ಚಾರ್ಜ್),'' ಎಂದು ಅನ್ಸಾರ್ ಮಾಹಿತಿ ನೀಡಿದ್ದಾರೆ.

“ಇಂತಹ  ಒಂದು ಅನುಕೂಲಕರ ಇ-ವೀಸಾ ಪ್ರಕ್ರಿಯೆ ಜಾರಿಗೊಳಿಸಿದ ಸೌದಿ ಸರಕಾರಕ್ಕೆ ನಾವು ಆಭಾರಿ. ನಗರದಲ್ಲಿ ಇ-ವೀಸಾಗೆ ಅಧಿಕೃತ ಏಜಂಟರಾಗಿರುವುದೂ ಖುಷಿಯಾಗಿದೆ. ಯಾತ್ರಾರ್ಥಿಗಳಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಗುರಿ” ಎಂದು ಅನ್ಸಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News