ಗಾಯಕ ದಲೇರ್ ಮೆಹಂದಿ ಬಿಜೆಪಿ ಸೇರ್ಪಡೆ

Update: 2019-04-26 13:13 GMT

ಹೊಸದಿಲ್ಲಿ, ಎ.26: ಜನಪ್ರಿಯ ಗಾಯಕ ದಲೇರ್ ಮೆಹಂದಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ವಿಜಯ್ ಗೋಯಲ್ ಹಾಗೂ ವಾಯುವ್ಯ ದಿಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನ್ಸ್‌ರಾಜ್ ಹನ್ಸ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಹಂದಿ ಬಿಜೆಪಿ ಸೇರ್ಪಡೆಗೊಂಡರು. 2013ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಮೆಹಂದಿ ಕಾಂಗ್ರೆಸ್‌ನ ಪ್ರಚಾರ ಗೀತೆಯನ್ನು ರಚಿಸಿ ಹಾಡಿದ್ದರು.

1998 ಮತ್ತು 199ರಲ್ಲಿ ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮೆಹಂದಿ ಹಾಗೂ ಅವರ ಸಹೋದರ ಮಿಕಾ ಸಿಂಗ್ ಆರೋಪಿಗಳಾಗಿದ್ದರು. ವಿದೇಶದಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮ ಆಯೋಜಿಸುವ ನೆಪದಲ್ಲಿ ತಮ್ಮ ತಂಡದಲ್ಲಿ ಕೆಲವರನ್ನು ಡ್ಯಾನ್ಸರ್‌ಗಳೆಂದು ವಿದೇಶಕ್ಕೆ ರವಾನಿಸುತ್ತಿದ್ದ ಪ್ರಕರಣದಲ್ಲಿ ದಲೇರ್ ಮೆಹಂದಿಗೆ ಕಳೆದ ವರ್ಷ 2 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಜೈಲುಶಿಕ್ಷೆ ಆದೇಶವನ್ನು ಅಮಾನತುಗೊಳಿಸಿ ಮೆಹಂದಿಯನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಬಾಲಿವುಡ್‌ನ ಸೂಪರ್ ಹಿಟ್ ಗೀತೆಗಳಾದ ‘ರಂಗ್ ದೆ ಬಸಂತಿ’ ಸಹಿತ ಹಲವು ಜನಪ್ರಿಯ ಗೀತೆಗಳನ್ನು ಹಾಡಿ ಮೆಹಂದಿ ಖ್ಯಾತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News