×
Ad

ಸ್ಕೇಟಿಂಗ್: ಮುಹಮ್ಮದ್ ಶಾಮಿಲ್ ಅರ್ಷದ್‌ಗೆ ಚಿನ್ನ, ಬೆಳ್ಳಿ, ಕಂಚು, ಡ್ಯಾಷೆಲ್‌ಗೆ ಬೆಳ್ಳಿ ಪದಕ

Update: 2019-04-26 20:38 IST

ಮಂಗಳೂರು, ಎ.26: ಉತ್ತರಪ್ರದೇಶದ ಗ್ರೇಟರ್ ನೊಯ್ಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್-2019ರಲ್ಲಿ ನಗರದ ಸ್ಕೇಟಿಂಗ್ ಪಟು ಮುಹಮ್ಮದ್ ಶಾಮಿಲ್ ಅರ್ಷದ್ ತಲಾ ಒಂದೊಂದು ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರೋಲರ್ ಸ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ ಹಾಗೂ ಉತ್ತರ ಪ್ರದೇಶ ರೋಲರ್ ಸ್ಪೋರ್ಟ್ಸ ಅಸೋಸಿಯೇಶನ್ ಆಯೋಜಿಸಿದ ಆಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 14 ವರ್ಷದೊಳಗಿನ ಬಾಲಕರ ಇನ್‌ಲೈನ್ ವಿಭಾಗದಲ್ಲಿ 500 ಪ್ಲಸ್ ಡಿ ರಿಂಕ್ ರೇಸ್‌ನಲ್ಲಿ ಚಿನ್ನ, ಒನ್ ಲ್ಯಾಪ್ ರಿಂಕ್ ರೇಸ್‌ನಲ್ಲಿ ಬೆಳ್ಳಿ ಹಾಗೂ 3000 ಮೀಟರ್ ರೋಡ್ ರೇಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಇವರು ಈಗಾಗಲೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ-ಬಹುಮಾನಗಳನ್ನು ಗಳಿಸಿದ್ದರು.
 ನಗರದ ಜಪ್ಪಿನಮೊಗರು ಯೆನೆಪೊಯ ಶಾಲೆಯ 6ನೆ ತರಗತಿ ವಿದ್ಯಾರ್ಥಿಯಾಗಿರುವ ಇವರು ನಗರದ ಅರ್ಷದ್ ಹುಸೇನ್ ಎಂ.ಎಸ್. ಮತ್ತು ರಮ್ಲತ್ ಅರ್ಷದ್ ದಂಪತಿಯ ಪುತ್ರ. ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದು, ಮೋಹನ್‌ದಾಸ್ ಕೆ. ಮತ್ತು ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಡ್ಯಾಷೆಲ್‌ಗೆ ಬೆಳ್ಳಿ ಪದಕ

ಉತ್ತರಪ್ರದೇಶದ ಗ್ರೇಟರ್ ನೊಯ್ಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್-2019ರಲ್ಲಿ ನಗರದ ಸ್ಕೇಟಿಂಗ್ ಪಟು ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಒಂದು ಬೆಳ್ಳಿ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರೋಲರ್ ಸ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ ಹಾಗೂ ಉತ್ತರ ಪ್ರದೇಶ ರೋಲರ್ ಸ್ಪೋರ್ಟ್ಸ ಅಸೋಸಿಯೇಶನ್ ಆಯೋಜಿಸಿದ ಆಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 14 ವರ್ಷದೊಳಗಿನ ವಿಭಾಗದ 500 ಮೀಟರ್ ರಿಂಕ್ ರೇಸ್‌ನಲ್ಲಿ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿದ್ದರು.

ನಗರದ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಮಾಲೆಮಾರ್ ನಿವಾಸಿ ಫ್ರಾನ್ಸಿಸ್ ಕೊನ್ಸೆಸ್ಸೊ ಹಾಗೂ ಡೋರಿಸ್ ಕೊನ್ಸೆಸ್ಸೊ ದಂಪತಿಯ ಪುತ್ರಿ. ಇವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾಗಿದ್ದು, ಮೋಹನ್‌ದಾಸ್ ಕೆ. ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News