×
Ad

ಎನ್‌ಎಂಪಿಟಿ ಟ್ರಸ್ಟಿ ಅಬೂಬಕರ್ ಕೃಷ್ಣಾಪುರ ಅವರಿಗೆ ಸನ್ಮಾನ

Update: 2019-04-26 20:47 IST

ಪಣಂಬೂರು, ಎ.26: ಇಲ್ಲಿನ ನವಮಂಗಳೂರು ಬಂದರು ಮಂಡಳಿಯ ಟ್ರಸ್ಟಿಯಾಗಿ 2ನೇ ಬಾರಿಗೆ ಆಯ್ಕೆಯಾದ ರಾಜ್ಯ ಇಂಟಕ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಕೃಷ್ಟಾಪುರ ಅವರನ್ನು ಗುರುವಾರ ಎನ್‌ಎಂಪಿಟಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಇಂಟಕ್ ವತಿಯಿಂದ ಸನ್ಮಾನಿಸಲಾಯಿತು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು , ಎನ್.ಎಂ.ಅಡ್ಯಂತಾಯ ಅವರ ಸಲಹೆ ಸಹಕಾರದಿಂದ ಕಾರ್ಮಿಕರ ಧ್ವನಿಯಾಗಲು ಮುಂದಾಗಿ ದ್ದೇನೆ. ಬಂದರಿನಲ್ಲಿ ಭಡ್ತಿ ಸಿಕ್ಕಿದರೂ ತ್ಯಜಿಸಿ ಕಾರ್ಮಿಕರ ಪರ ಹೋರಾಟಕ್ಕೆ ಇಳಿದಿದ್ದೇನೆ. ಇಂಟಕ್ ಸಂಘಟನೆಯ ಮೂಲಕ ಕಾರ್ಮಿಕ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಸನ್ಮಾನಿಸಿ ಮಾತನಾಡಿದ ಇಂಟಕ್ ಮುಖಂಡ, ಮಾಜಿ ಶಾಸಕ ಎನ್.ಎಂ. ಅಡ್ಯಂತಾಯ 30 ವರ್ಷದ ಹಿಂದೆ ಕೆಲವು ಪಟ್ಟ ಭದ್ರ ಹಿತಾಸಕ್ತಿಯಿಂದ ನಾವು ಸೋಲಬೇಕಾಯಿತು. ಆದರೆ ಪ್ರಾಮಣಿಕತೆಗೆ ಲ ಸಿಕ್ಕಿದೆ. ಸಂಪೂರ್ಣ ಕಾರ್ಮಿಕ ಏಳಿಗೆಗಾಗಿ ಬದ್ಧನಾಗಿ ಇಂಟಕ್ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರ ಹಿತ ಹಾಗೂ ಹಲವು ಯೋಜನೆಗಳನ್ನು ಕಲ್ಪಿಸಿದ್ದೇವೆ. ಕಾರ್ಮಿಕರ ಏಳಿಗೆಗಾಗಿ ಇಂಟಕ್ ಸಂಘಟನೆಯನ್ನು ಅಬೂಬಕರ್ ಬಂದರಿನಲ್ಲಿ ಬಲವರ್ದನೆ ಗೊಳಿಸುತ್ತಿದ್ದಾರೆ ಎಂದು ಶ್ಲಾಸಿದರು.

ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಸುರೇಶ್, ರಾಜ್ಯ ಇಂಟಕ್ ಉಪಾಧ್ಯಕ್ಷ ಸಿ.ಎ.ರಹೀಂ,ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಆರ್. ನಾರಾಯಣ್, ನವಮಂಗಳೂರು ಬಂದರು ಮಂಡಳಿಯ ಕಾರ್ಮಿಕ ನಾಯಕ ಕೆ. ಫಾರೂಕ್, ಇಂಟಕ್ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಶಿವಣ್ಣ, ಸ್ಟೀವನ್, ಸುಕುಮಾರ್, ನಾರಾಯಣ ಶೆಟ್ಟಿ, ಎಲಿಯನ್, ಶಂಭು ಶೆಟ್ಟಿ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ವಿಜಯ್ ಸುವರ್ಣ ಸ್ವಾಗತಿಸಿದರು. ಹರೀಶ್ ಕುಮಾರ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News