×
Ad

ಸ್ಫೋಟಗಳ ಸೂತ್ರಧಾರಿ ಶಾಂಗ್ರೀಲಾ ಹೊಟೇಲ್ ದಾಳಿಯಲ್ಲಿ ಹತ: ಶ್ರೀಲಂಕಾ ಅಧ್ಯಕ್ಷ

Update: 2019-04-26 21:58 IST

ಕೊಲಂಬೊ, ಎ. 26: ಶ್ರೀಲಂಕಾದ ಭೀಕರ ಸರಣಿ ಬಾಂಬ್ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿರುವನೆಂದು ನಂಬಲಾದ ಭಯೋತ್ಪಾದಕನೊಬ್ಬ ಕೊಲಂಬೊದ ಹೊಟೇಲೊಂದರಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ದೇಶದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ಖಚಿತಪಡಿಸಿದ್ದಾರೆ.

‘‘ಶಾಂಗ್ರೀಲಾ ಹೊಟೇಲ್‌ನಲ್ಲಿ ನಡೆದ ದಾಳಿಯಲ್ಲಿ ಝಹ್ರನ್ ಸತ್ತಿದ್ದಾನೆ ಎಂಬುದಾಗಿ ಗುಪ್ತಚರ ಸಂಸ್ಥೆಗಳು ನನಗೆ ಹೇಳಿವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿರಿಸೇನ ಸ್ಥಳೀಯ ಉಗ್ರಗಾಮಿ ಗುಂಪಿನ ನಾಯಕ ಝಹ್ರನ್ ಹಾಶಿಮ್ ಬಗ್ಗೆ ಹೇಳಿದರು.

ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡ ಬಳಿಕ, ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಬಿಡುಗಡೆಗೊಳಿಸಿದ ವೀಡಿಯೊವೊಂದರಲ್ಲಿ ಹಾಶಿಮ್ ಕಾಣಿಸಿಕೊಂಡಿದ್ದಾನೆ. ಆದರೆ, ಸ್ಫೋಟಗಳ ಬಳಿಕ ಅವನು ಎಲ್ಲಿದ್ದಾನೆ ಎನ್ನುವುದು ಸ್ಪಷ್ಟವಾಗಿರಲಿಲ್ಲ.

ಶಾಂಗ್ರೀಲಾ ಹೊಟೇಲ್‌ನಲ್ಲಿ ನಡೆದ ದಾಳಿಯಲ್ಲಿ ಹಾಶಿಮ್ ವಹಿಸಿದ ಪಾತ್ರವೇನು ಎನ್ನುವುದನ್ನು ಸಿರಿಸೇನ ಸ್ಪಷ್ಟಪಡಿಸಿಲ್ಲ.

ಬಾಂಬ್ ಸ್ಫೋಟಗಳ ಹಿಂದೆ ಉಗ್ರಗಾಮಿ ಗುಂಪು ನ್ಯಾಶನಲ್ ತೌಹೀದ್ ಜಮಾಅತ್ ಇದೆ ಎಂಬುದಾಗಿ ಸರಕಾರ ಘೋಷಿಸಿದ ಬಳಿಕ, ಅದರ ಮುಖ್ಯಸ್ಥ ಹಾಶಿಮ್‌ನಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧಕಾರ್ಯಚರಣೆ ಆರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News