×
Ad

ವಿಪತ್ತು ನಿರ್ವಹಣೆ: ಕರಾವಳಿಗೆ ಎನ್‌ಡಿಆರ್‌ಎಫ್ ತಂಡ

Update: 2019-04-26 22:26 IST

ಉಡುಪಿ, ಎ.26: ಮುಂಬರುವ ಮಳೆಗಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪವನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತು ಪರಿಹಾರ ತಂಡದ (ಎನ್‌ಡಿಆರ್‌ಎಫ್) ಒಂದು ತಂಡವನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಕಳುಹಿಸುವಂತೆ ರಾಜ್ಯ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆಂಧ್ರಪ್ರದೇಶದ ಗುಂಟೂರಿನ ಲ್ಲಿರುವ ಎನ್‌ಡಿಆರ್‌ಎಫ್‌ನ ದಕ್ಷಿಣ ವಲಯ ಕಚೇರಿಯ ಕಮಾಂಡೆಂಟ್‌ಗೆ ಪತ್ರ ಬರೆದಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿ ಒಂದು ಹಾಗೂ ಮೈಸೂರು, ಹಾಸನ ಮತ್ತು ಮಲೆನಾಡಿನ ಇತರ ಭಾಗಗಳು ಸೇರಿದಂತೆ ಕೊಡಗಿನಲ್ಲಿ ಒಂದು ತಂಡವನ್ನು ಇರಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಎನ್‌ಡಿಆರ್ ಎಫ್‌ನ 30 ಸದಸ್ಯರ ಒಂದು ತಂಡವನ್ನು ಕಳುಹಿಸಿ ತಲಾ 15 ಮಂದಿಯನ್ನು ಎರಡು ಕಡೆಗಳಲ್ಲಿ ನಿಯೋಜಿಸುವಂತೆ ಪತ್ರದಲ್ಲಿ ವಿನಂತಿಸಲಾಗಿದೆ.

ಸೋಮವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ವಿಪತ್ತು ನಿರ್ವಹಣೆ ಕಾರ್ಯಕ್ರಮಗಳ ಮತ್ತು ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತ ಸೆಯಲ್ಲಿ ಅವರು ಮಾತನಾಡುತಿದ್ದರು.

ಮಳೆಗಾಲ ಪ್ರಾರಂಭಗೊಳ್ಳುವ ಮೊದಲೇ ಅಂದರೆ ಮೇ ಕೊನೆಯ ವಾರದಲ್ಲಿ ತಂಡವನ್ನು ಕಳುಹಿಸುವುದರಿಂದ ತುರ್ತು ಸಂದರ್ಭದಲ್ಲಿ ತಕ್ಷಣವೇ ಸೇವೆ ಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಎನ್‌ಡಿಆರ್‌ಎಫ್ ತಂಡವನ್ನು ಸುರತ್ಕಲ್‌ನಲ್ಲಿ ಇರಿಸಲಾಗುತ್ತದೆ. ಇನ್ನೊಂದು ತಂಡ ಕೊಡಗಿನಲ್ಲಿ ಮೊಕ್ಕಾಂ ಹೂಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News