×
Ad

ಕರೋಪಾಡಿ: ಎಸ್ಸೆಸ್ಸೆಫ್ ನಾಯಕತ್ವ ಶಿಬಿರ

Update: 2019-04-27 13:45 IST

​​​​ವಿಟ್ಲ, ಎ.27: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ ಕನ್ಯಾನದ ಕರೋಪಾಡಿ ಸಿರಾಜುಲ್ ಹುದಾ ಪಾಡಿಯಲ್ಲಿ ಡಿವಿಷನ್ ಹಾಗೂ ಸೆಕ್ಟರ್ ನಾಯಕರಿಗಾಗಿ ತರಬೇತಿ ಶಿಬಿರ ‘ಒಫಿನ್ಶೀಯಾ’ ಆಯೋಜಿಸಲಾಗಿತ್ತು.

ಶಿಬಿರವನ್ನು ಎಸ್.ವೈ.ಎಸ್. ವಿಟ್ಲ ಸೆಂಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಡಿ ಉದ್ಘಾಟಿಸಿ ಮಾತನಾಡಿದರು.

 ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಸ್ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಮಾತನಾಡಿ ನಾಯಕತ್ವದ ಶ್ರೇಷ್ಠತೆ ಮತ್ತು ಜವಾಬ್ದಾರಿಯ ಕುರಿತು ವಿವರಿಸಿದರು.

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ಅಧ್ಯಕ್ಷತೆ ವಹಿಸಿದ್ದರು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಕಾರ್ಯಕ್ರಮ ಸಂಯೋಜನೆ ಹಾಗೂ ತರಬೇತಿ ವಿಭಾಗದ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ, ಡಿವಿಷನ್ ಕೋಶಾಧಿಕಾರಿ ಸಿ.ಎಚ್. ಅಬ್ದುಲ್ ಖಾದರ್ ಕೊಡಂಗಾಯಿ, ಉಪಾಧ್ಯಕ್ಷ ರಝಾಕ್ ಪೆಲ್ತಡ್ಕ, ವಿಟ್ಲ ಸೆಕ್ಟರ್ ಅಧ್ಯಕ್ಷ ನೌಫಲ್ ಮದನಿ, ಕನ್ಯಾನ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ಮಂಡ್ಯೂರು, ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷ ಹಾಫಿಳ್ ನಝೀರ್ ಅಹ್ಮದ್ ಸಖಾಫಿ, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಾಹೀರ್ ಕೊಳಂಬೆ ಮೊದಲಾದವರು ಉಪಸ್ಥಿತರಿದ್ದರು.

ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಹಿಮಮಿ ಸಖಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಜಂಶಾದ್ ಕಂಬಳಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News