×
Ad

ಪರ್ಕಳದಲ್ಲಿ ಅಪರೂಪದ ಕಟ್ಟು ತೋಳ ಹಾವು ಪತ್ತೆ

Update: 2019-04-27 16:55 IST

ಉಡುಪಿ, ಎ.27: ಪರ್ಕಳ ಸಮೀಪದ ಗ್ಯಾಟ್ಸನ್ ಎಂಬಲ್ಲಿರುವ ಮನೆ ಯೊಂದರಲ್ಲಿ ಇಂದು ಅಪರೂಪವಾಗಿ ಕಾಣ ಸಿಗುವ ಅತ್ಯಾಕರ್ಷಕ ಕಟ್ಟು ತೋಳ ಹಾವು(ಕಾಮನ್ ವೂಲ್ಫ್ ಸ್ನೇಕ್) ಪತ್ತೆಯಾಗಿದೆ.

ಗ್ಯಾಟ್ಸನ್‌ನ ಸೂರಪ್ಪ ಪೂಜಾರಿ ಎಂಬವರ ಮನೆಯಲ್ಲಿ ಕಂಡು ಬಂದ ಈ ಹಾವು ಸುಮಾರು 6 ಇಂಚು ಉದ್ದವಿದ್ದು, ಕಟ್ಟು ತೋಳ ಹಾವಿನ ಮರಿಯಾಗಿದೆ. ಸಾದಾರಣವಾಗಿ ಈ ಹಾವು ಸುಮಾರು 50 ಸೆ.ಮೀ. ಉದ್ದ ಬೆಳೆಯುತ್ತದೆ. ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರ ಸಲಹೆಯಂತೆ ಸಾಮಾಜಿಕ ಕಾರ್ಯಕರ್ತರಾದ ಗಣೇಶ್‌ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಅದನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಟ್ಟರು.

ಕಂದು, ಕಪ್ಪು, ಬೂದು ಹೀಗೆ ಮೂರು ಬಣ್ಣಗಳಲ್ಲಿ ಕಂಡು ಬರುವ ಈ ಹಾವಿಗೆ ಬಿಳಿಯ ಕಟ್ಟು ಇವೆ. ವಿಷಕಾರಿ ಅಲ್ಲದ ಈ ಹಾವು ಮನೆಯ ಗೋಡೆಯಲ್ಲಿರುವ ಹಲ್ಲಿಗಳನ್ನು ಹಿಡಿದು ತಿನ್ನುತ್ತವೆ. ಮನೆಯಲ್ಲಿ ಕಂಡು ಬರುವ ಹಲ್ಲಿ, ಕ್ರಿಮಿಕೀಟಗಳನ್ನು ಸೇವಿಸುವ ಮೂಲಕ ಈ ಹಾವು ಪರಿಸರದಲ್ಲಿ ಸಮಾತೋಲನ ಕಾಪಾಡುವ ಕೆಲಸ ಮಾಡುತ್ತವೆ ಎಂದು ಗುರುರಾಜ್ ಸನಿಲ್ ತಿಳಿಸಿದ್ದಾರೆ.

ಎಪ್ರಿಲ್ ಮೇ ತಿಂಗಳಲ್ಲಿ ಈ ಹಾವು ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಇದು ಸಾಮಾನ್ಯ ತೋಳ ಹಾವಾಗಿದ್ದರೂ ಕರಾವಳಿಯಲ್ಲಿ ಅಪರೂಪ ಎಂಬಂತೆ ಕಂಡುಬರುತ್ತವೆ. ಕೆಲವರು ಈ ಹಾವನ್ನು ತಪ್ಪುಗ್ರಹಿಕೆಯಿಂದ ವಿಷದ ಹಾವು ಕಡಂಬಲ ಎಂದು ಭಾವಿಸಿ ಕೊಲ್ಲುತ್ತಿದ್ದಾರೆ. ಈ ಹಾವು ಮನೆಯೊಳಗೆ ಕಂಡು ಬಂದರೆ ಹೊರಗಡೆ ಕಳುಹಿಸಿ ಹೊರತು ಕೊಲ್ಲುವುದು ಬೇಡ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News