×
Ad

‘ಖೈರಿಯಾ ಶೆಲ್ಟರ್’ ನಲ್ಲಿ ವಿದ್ಯಾರ್ಥಿನಿಯರಿಗೆ ಪ್ರೇರಣಾ ಕಾರ್ಯಕ್ರಮ

Update: 2019-04-27 19:08 IST

ಮಂಗಳೂರು: ಎ 27, ನಗರದ ಬಬ್ಬುಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಅನಾಥ, ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ಪಾಲನಾ ಕೇಂದ್ರ ‘ಖೈರಿಯಾ ಶೆಲ್ಟರ್’ ನಲ್ಲಿ ವಿದ್ಯಾರ್ಥಿನಿಯರಿಗೆ ಪ್ರೇರಣಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖೈರಿಯಾ ಟ್ರಸ್ಟ್ ನ ಅಧ್ಯಕ್ಷ ಹಾಜಿ ಎಸ್.ಎಂ ರಶೀದ್ ವಹಿಸಿದ್ದರು.

ಸಂಪನ್ಮೂಲ ವ್ಯಕಿಗಳಾಗಿದ್ದ ಪಿ.ಎ ಕಾಲೇಜಿನ ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಸರ್ಫರಾಝ್ ಜೆ ಹಾಶಿಮ್‍ರವರು ಮಾನವನ ಮನಶಕ್ತಿ, ಸಕಾರಾತ್ಮಕ ಚಿಂತನೆ, ಕನಸು, ಗುರಿ ನಿರ್ಧಾರ ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷತೆಯೊಂದಿಗೆ ತರಬೇತಿ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಲಹೆಗಾರ ರಫೀಕ್ ಮಾಸ್ಟರ್ ಶಿಕ್ಷಣ ರಂಗದಲ್ಲಿ ಹೆಣ್ಮಕ್ಕಳ ಸಾಧನೆ, ಅವರಿಗೆ ಇರುವ ಅವಕಾಶಗಳು, ಎಸ್ಸೆಸೆಲ್ಸಿ , ಪಿ.ಯು.ಸಿ, ಡಿಗ್ರಿ ಮುಂದೇನು? ಮುಂತಾದ ವಿಷಯಗಳಲ್ಲಿ ಮಾರ್ಗದರ್ಶನಗೈದು ವಿದ್ಯಾರ್ಥಿನಿಯರಿಗೆ ಸ್ಫೂರ್ತಿ ತುಂಬಿದರು.

ಸಂಸ್ಥೆಯ ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಗ್ರೂಪ್ 4 ಸ್ವಾಗತಿಸಿದರು. ವ್ಯವಸ್ಥಾಪಕ ಮುಹಮ್ಮದ್ ಧನ್ಯವಾದಗೈದರು. ವಿದ್ಯಾರ್ಥಿನಿ ಹನ್ನತ್ ಕಾರ್ಯಕ್ರಮ ನಿರೂಪಿಸಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News