×
Ad

ರಸ್ತೆ ದಾಟುತ್ತಿದ್ದ ವೇಳೆ ವಾಹನ ಢಿಕ್ಕಿ: ಮಹಿಳೆ ಮೃತ್ಯು

Update: 2019-04-27 19:49 IST

ಮಂಜೇಶ್ವರ : ಮಹಿಳೆಯೋರ್ವರು ರಸ್ತೆ ದಾಟುತ್ತಿದ್ದ ವೇಳೆ ಪಿಕ್‍ಅಪ್ ವಾಹನ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಶನಿವಾರ ನಾಯ್ಕಾಪು ಪರಿಸರದಲ್ಲಿ ನಡೆದಿದೆ.

ರಮೇಶ್ ಎಂಬವರ ಪತ್ನಿ ಜಲಜಾಕ್ಷಿ ಆಚಾರ್ಯ(42)ಮೃತ ಮಹಿಳೆ. ನಾಯ್ಕಾಪಿನ ಖಾಸಗೀ ಆಹಾರೋತ್ಪನ್ನ ತಯಾರಿ ಘಟಕವೊಂದರಲ್ಲಿ ಉದ್ಯೋಗಿಯಾಗಿರುವ ಇವರು ಎಂದಿನಂತೆ ಮಧ್ಯಾಹ್ನ ಮನೆಗೆ ಊಟ ಮಾಡಲು ತೆರಳುವ ಸಂದರ್ಭ ಅಪಘಾತ ಸಂಭವಿಸಿದೆ. ರಸ್ತೆ ದಾಟುವ ವೇಳೆ ವೇಗವಾಗಿ ಆಗಮಿಸಿದ  ಪಿಕ್‍ಅಪ್ ವಾಹನ ಜಲಜಾಕ್ಷಿ ಅವರಿಗೆ ಢಿಕ್ಕಿ ಹೊಡೆದಿದ್ದು, ತಕ್ಷಣ ಅವರನ್ನು ಕುಂಬಳೆ ಜಿಲ್ಲಾಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಅವರು ದಾರಿ ಮಧ್ಯೆ ಮೃತಪಟ್ಟರು.

ಮೃತ ಮಹಿಳೆ ಪತಿ, ಸಹೋದರಿಯನ್ನು ಅಗಲಿದ್ದಾರೆ. ಅಪಘಾತಕ್ಕೆ ಕಾರಣವಾದ ಕೆಎಲ್ 14 ವಿ.5523 ದಾಖಲಾತಿ ಸಂಖ್ಯೆಯ ಪಿಕ್ ಅಪ್ ವಾಹನ ಚಾಲಕನ ಮೇಲೆ ಪೋಲೀಸರು ದೂರು ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News