ಹಿರಿಯಡ್ಕ: ರೋವರ್-ರೇಂಜರ್ಸ್‌ ಚಾರಣ ಶಿಬಿರ

Update: 2019-04-27 14:39 GMT

ಉಡುಪಿ, ಎ.27: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮತ್ತು ರೇಂಜರ್ ಘಟಕದ ವತಿಯಿಂದ ಮೂರು ದಿನಗಳ ಚಾರಣ ಶಿಬಿರವನ್ನು ಕೇರಳದ ಪಯ್ಯನ್ನೂರಿಗೆ ಹಮ್ಮಿಕೊಳ್ಳಲಾಗಿತ್ತು. ಚಾರಣ ಶಿಬಿರದಲ್ಲಿ ಕಾಲೇಜಿನ ರೋವರ್ ಮತ್ತು ರೇಂಜರ್ಸ್‌ ಘಟಕದ 11 ರೋವರ್ ಮತ್ತು ರೇಂಜರ್ಸ್‌ಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳು ಚಾರಣ ಸಮಯದಲ್ಲಿ ಕೇರಳದಲ್ಲೇ ಅತಿ ಎತ್ತರದ ಹನುಮಂತನ ವಿಗ್ರಹ ವಿರುವ ಬೆಟ್ಟಕ್ಕೆ ಚಾರಣ ನಡೆಸಿದರು.

ನಂತರ ಶಿಬಿರಾರ್ಥಿಗಳು ಸಮೀಪದ ಚಾವಕ್ಕಡು ಬೀಚಿಗೆ ತೆರಳಿ ಬೀಚ್‌ನ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿ ಸ್ಥಳೀಯರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ಬೀಚಿನ ತಟದಲ್ಲಿ ಮರಳು ಕಲಾಕೃತಿಗಳನ್ನು ರಚಿಸಿದರು.

ಚಾರಣ ಶಿಬಿರದ ನೇತೃತ್ವವನ್ನು ಕಾಲೇಜಿನ ರೋವರ್ ಘಟಕದ ಸಂಚಾಲಕ ಅನಿಲ್ ಕುಮಾರ್ ಕೆ. ಎಸ್ ಹಾಗೂ ರೇಂಜರ್ ಘಟಕದ ಸಂಚಾಲಕಿ ಸವಿತಾ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಸಲಹೆ ಸೂಚನೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News