×
Ad

ರೋಟರಿ ಕ್ಲಬ್ ಟೆಂಪಲ್‍ಟೌನ್‍ಗೆ ರೋಟರಿ ರಾಜ್ಯಪಾಲರ ಭೇಟಿ

Update: 2019-04-27 21:17 IST

ಮೂಡುಬಿದಿರೆ : ರೋಟರಿ ಸಂಸ್ಥೆಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಯುವಜನರೂ ರೋಟರಿ ಆಂದೋಲನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರೋಟರಿಯ ಮೂಲಕ ದೇಣಿಗೆಯನ್ನು ವಿದೇಶಕ್ಕೆ ನೀಡಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ವಿದೇಶೀ ರೋಟರಿಗಳೊಂದಿಗೆ ಮ್ಯಾಚಿಂಗ್ ಗ್ರ್ಯಾಂಟ್ ಮೂಲಕ ಹೆಚ್ಚು ಅನುದಾನವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ರೋಟರಿ  ಜಿಲ್ಲಾ ರಾಜ್ಯಪಾಲ ರೋಹಿನಾಥ್ ಪಿ ಹೇಳಿದರು.

ರೋಟರಿ ಕ್ಲಬ್ ಟೆಂಪಲ್‍ಟೌನ್‍ಗೆ ಬುಧವಾರ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಟೆಂಪಲ್‍ಟೌನ್ ಪಾರ್ಕ್‍ನ ನೂತನ ಕಟ್ಟಡದಲ್ಲಿ ಜರಗಿದ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಸಮಾಜದ ಋಣವಿದ್ದು ದುಡಿಮೆಯ ಸ್ವಲ್ಪಾಂಶವನ್ನು ಸಮಾಜಕ್ಕಾಗಿ ಮೀಸಲಿಡಬೇಕು. ಸಮಾಜದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು. ನಾವು ನೀಡುವ ಸೇವೆಯು ನಿಜವಾದ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದರು.

ರೋಟರಿ ಜಿಲ್ಲಾ ಉಪರಾಜ್ಯಪಾಲ ಪ್ರಕಾಶ್ ಕಾರಂತ, ಝೋನಲ್ ಲೆಪ್ಟಿನೆಂಟ್ ಸುಧೀರ್ ಪ್ರಭು, ಜಿ.ಎಸ್.ಆರ್ ಡಾ.ಹರೀಶ್‍ನಾಯಕ್ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸೇವಾ ಚಟುವಟಿಕೆಗಳ ಭಾಗವಾಗಿ ನಾಲ್ಕು ಅಸಹಾಯಕ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ, ಕಾಯಿಲೆಯಿಂದ ಬಳಲುತ್ತಿರುವ ಅಕ್ಷತಾ ಎಂಬ ಬಾಲಕಿಗೆ ಚುಚ್ಚುಮದ್ದನ್ನು ಹಸ್ತಾಂತರಿಸಲಾಯಿತು. ಹಾಗೂ ಪೂಜಾ ಅವರ ಶೈಕ್ಷಣಿಕ ವೆಚ್ಚಕ್ಕೆ ನೆರವು ನೀಡಲಾಯಿತು. ಕೊಡಗು ಸಂತ್ರಸ್ತರಿಗೆ ಜಿಲ್ಲಾ ರೋಟರಿ ವತಿಯಿಂದ 40 ಮನೆಗಳ ನಿರ್ಮಾಣಕ್ಕೆ ಟೆಂಪಲ್‍ಟೌನ್ ಸದಸ್ಯರಿಂದ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಅಜಯ್ ಗ್ಲೆನ್ ಡಿಸೋಜ ಸಂಪಾದಕತ್ವದಲ್ಲಿ ಹೊರತರಲಾದ ರೋಟರಿ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಾಧಕ ಉದ್ಯಮಿ ಗಣೇಶ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.ನೂತನ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಟೆಂಪಲ್‍ಟೌನ್ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಭಾಗವಹಿಸಿದರು.
ಕಾರ್ಯದರ್ಶಿ ಡೆನಿಸ್ ಪಿರೇರಾ ವರದಿ ವಾಚಿಸಿದರು. ಡಾ.ಅಮರ್‍ದೀಪ್, ಪ್ರವೀಣ್ ಪಿರೇರಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News