ಕನ್ಯಾನ: ನೇಣುಬಿಗಿದು ವಿವಾಹಿತ ಆತ್ಮಹತ್ಯೆ
ಬಂಟ್ವಾಳ, ಎ. 27: ವಿವಾಹಿತನೋರ್ವ ತನ್ನ ಸಂಬಂಧಿಕರ ಮನೆ ಸಮೀಪದ ಪಾಳುಬಾವಿಯ ಕಂಬಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ಮರ್ತನಾಡಿ ಎಂಬಲ್ಲಿ ಎ.27ರಂದು ನಡೆದ ಬಗ್ಗೆ ವರದಿಯಾಗಿದೆ.
ಮಂಜೇಶ್ವರ ತಾಲೂಕಿನ ಮಿಂಜ ಗ್ರಾಮದ ಮಿಯಪದವು ಪೆಲ್ತಡ್ಕ ದಿ.ತುಕ್ರರವರ ಪುತ್ರ ಕೃಷ್ಣ(65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮರ್ತನಾಡಿಯ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿರುವ ಪಾಳುಬಾವಿಯ ಕಂಬಕ್ಕೆ ಲುಂಗಿಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಪರೀತವಾಗಿ ಕುಡಿತದ ಚಟ ಹೊಂದಿರುವ ಕೃಷ್ಣ, ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಮೃತರ ಸಂಬಂಧಿ ಮರ್ತನಾಡಿ ದರ್ಖಾಸು ನಿವಾಸಿ ಲಕ್ಷ್ಮೀರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪ್ರೋಬೆಷನರಿ ಎಸ್ಸೈ ರಾಜೇಶ್, ಎಎಸ್ಸೈಗಳಾದ ರವೀಶ್, ದನಂಜಯ ಹಾಗೂ ಸಿಬಂದಿ ಅನುಕುಮಾರ್ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.