ವಾಹನ ಅಪಘಾತ: ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಹಿತ ನಾಲ್ವರಿಗೆ ಗಾಯ
Update: 2019-04-28 11:46 IST
ಕಾಸರಗೋಡು, ಎ.28: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಕಾಲಿಕಡವು ಆನೂರು ತಿರುವಿನಲ್ಲಿ ಶನಿವಾರ ನಡೆದಿದೆ
ಕಾಲಿಗೆ ಗಾಯಗೊಂಡ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಮತ್ತು ಚಾಲಕ ರಾಜನ್ ಪಾಲಯಿ ಅವರು ಪಯ್ಯನ್ನೂರು ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.
ಇನ್ನೊಂದು ಕಾರಿನಲ್ಲಿದ್ದ ಕುಂಡಂಗುಯಿ ಮೇಲಂಗೋಡ್‌ನ ಕೆ.ಮೋಹನ್(42) ಮತ್ತು ಪತ್ನಿ ಸಿ.ಶೋಭಾ(37) ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಮೋಹನ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋಹನ್ ಕಾರಿನಲ್ಲಿ ಪರಶ್ಯಿನಿ ಕಡವು ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದರೆ, ಎಂ.ವಿ.ಬಾಲಕೃಷ್ಣ ನ್ ಅವರು ಕರಿವೆಳ್ಳೂರಿನಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರೆನ್ನಲಾಗಿದೆ.